SHARE

ಬೆಂಗಳೂರು: ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್​​ ಅವಕಾಶ ನೀಡಿ ಆದೇಶ ನೀಡಿದ ಹಿನ್ನೆಲೆ ಶಿವಾಜಿನಗರ ಅನರ್ಹ ಶಾಸಕ ರೋಷನ್​ ಬೇಗ್​ ಹೊರತು ಪಡಿಸಿ ಉಳಿದ ಕಾಂಗ್ರೆಸ್​-ಜೆಡಿಎಸ್​ನ 16 ಶಾಸಕರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡನೆಗೊಂಡರು.

ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಸಮ್ಮುಖದಲ್ಲಿ ಎಲ್ಲಾ ಅನರ್ಹರು ಕಮಲ ಪಾಳೆಯ ಸೇರಿದರು. ಅವರಿಗೆ ಪಕ್ಷದ ಧ್ವಜ ನೀಡಿ ಶಾಲು ಹೊದಿಸಿ ಅಧಿಕೃತವಾಗಿ ಪಕ್ಷಕ್ಕೆ ನಾಯಕರು ಸ್ವಾಗತಿಸಿದರು. ಈ ಸಂದರ್ಭಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್​ ಕೂಡ ಸಾಕ್ಷಿಯಾದರು.

ಇನ್ನು ಐಎಂಎ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರೋಷನ್​ ಬೇಗ್​ ಸೇರ್ಪಡೆಗೆ ಬಿಜೆಪಿಯಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಅವರು ಪಕ್ಷಕ್ಕೆ ಸೇರ್ಪಡನೆಯಾಗಿಲ್ಲ. ಬಿಸಿ ಪಾಟೀಲ್​ ಜೊತೆ ಅವರ ಮಗಳು ಸೃಷ್ಟಿ ಪಾಟೀಲ್​ ಕೂಡ ಬಿಜೆಪಿ ಸದಸ್ಯತ್ವ ಪಡೆದು ಗಮನಸೆಳೆದರು. .