SHARE

ಬೆಳಗಾವಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಮೂರು ವರ್ಷದ ಹಿಂದೆ ದಿವಾಳಿಗೆ ಸರಿದಿತ್ತು. ಆಡಳಿತ ಮಂಡಳಿ ಬದಲಾಯಿಸಿ ಅಭಿವೃದ್ಧಿ ಮಾಡಿ ರೈತರ ಹಿತ ಕಾಯುವಂತೆ ₹57ಕೋಟಿ ಸಾಲದ ಭಾರ ಕಡಿಮೆ ಮಾಡಿದ್ದೇವೆ ಎಂದು ಮಾಜಿ ಕೇಂದ್ರ ಸಚುವ ಬಾಬಾಗೌಡ ಪಾಟೀಲ ತಿಳಿಸಿದರು.
ಇಂದು ಸುದ್ದುಗೋಷ್ಠಿಯಲ್ಲಿ ಮಾತನಾಡಿ ಅನೇಕ ಖಾಸಗಿ ಕಾರ್ಖಾನೆಗಳ ನಮ್ಮ ಎಂ. ಕೆ. ಹುಬ್ಬಳ್ಳಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಿಸಲು ಪ್ರಯತ್ನಿಸಿದರೂ, ರೈತರೇ ತಮ್ಮ ಕಬ್ಬು ಕಳಿಸಿ ನಮ್ಮನ್ನು ಉಳಿಸಿದ್ದಾರೆ. 2017-18ನೇ ಸಾಲಿಗೆ ನಮ್ಮ ಕಾರ್ಖಾನೆಯೂ ಎಫ್ ಆರ್ ಪಿ ಬೆಲೆ ರೈತರಿಗೆ ಕೊಟ್ಟರೂ ₹5.24ಕೋಟಿ ಬಾಕಿ ಉಳಿದಿದೆ. ಇದಕ್ಕೆ ಕಾರಣ ಕಾರ್ಖಾನೆ ಆಡಳಿತ ಮಂಡಳಿಯಲ್ಲ. ಆಗಿನ ವ್ಯವಸ್ಥಾಪಕ ನಿರ್ದೇಶಕ ಮಾಡಿದ ಬೇಕಾಬಿಟ್ಟಿ ಎಡವಟ್ಟು ಹಾನಿಗೆ ಕಾರಣವಾಗಿದೆ.
₹4.50 ಕೋಟಿ ಕಬ್ಬು ಕಟಾವು ಗ್ಯಾಂಗಿಗೆ ಕೊಡಬೇಕೆಂದು ತನ್ನ ಹೊಣೆಗಾರತ್ವದಲ್ಲೇ ನಂಬಿಸಿ ಒಂದೂ ಗ್ಯಾಂಗ್ ಬರದಂತೆ ನೋಡಿಕೊಂಡಿದ್ದಾನೆ.
2018-19ನೇ ಸಾಲಿಗೆ ಕಬ್ಬು ನುರಿಸಿದ ರೈತರಿಗೆ ಎಫ್ ಆರ್ ಪಿ ದರ ಕಾಲ ಟ್ಟೊದ್ದೇವೆ. 5.94ಕೋಟಿ ಬಾಕಿ ಉಳಿದಿದೆ.
7.70ಕೋಟಿ ಹಣ ಸಾಲ ಕೊಡಬೇಕೆಂದು ಡಿಸಿಸಿ ಬ್ಯಾಂಕಿಗೆ ಪ್ರಸ್ತಾವಬೆ ಸಲ್ಲಿಸಿದರೂ ಸಾಲ ಸಿಕ್ಕಿಲ್ಲ. ಬ್ಯಾಂಕ್ ಆಫ್ ಇಂಡಿಯಾ ₹3ಕೋಟಿ ಮಂಜೂರು ಮಾಡಿದ್ದಾರೆ. ಜೊತೆಗೆ ಸಕ್ಕರೆ ಮಾರಿ ಬಂದ ಹಣ ಸೇರಿಸಿ 594ಲಕ್ಷ ಬಾಕಿ ತೀರಿಸುತ್ತೇವೆ ಎಂದು ನಮ್ಮ ಕಾರ್ಖಾನೆ ಭರವಸೆ ನೀಡಿದೆ. ಕಳೆದ ವರ್ಷದ ಬಾಕಿ ತೀರಿಸಿ ಈ ವರ್ಷದ ಬಾಕಿ ಸಹ ತೀರಿಸುವ ಹಣ ಇದೆ. ಆದರೆ ಏಜಾಏಕಿ ಜಿಲ್ಲಾಡಳಿತ ನಮ್ಮ ಕಾರ್ಖಾನೆ ಸೀಸ್ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ಕಾರ್ಖಾನೆ ಅವರು ಎಷ್ಟೋ ಬಾಕಿ ಕೊಡಬೇಕಾಗಿದೆ. ಅದರ ಬಗ್ಗೆ ಆಡಳಿತಕ್ಕೆ ಗಮನವಿಲ್ಲ ಎಂದರು.
29,495ಕ್ವಿಂಟಲ್ ಸಕ್ಕರೆ ಬಿಡುಗಡೆ ಮಾಡಿಲ್ಲ ಎಂದರು. ಜಿಲ್ಲಾಡಳಿತವೇ ಸಕ್ಕರೆ ಮಾರಿ ರೈತರ ಬಿಲ್ ಕೊಡುವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಆದರೆ ಮಾರ‌ದೇ ಗೋದಾಮಿನಲಗಲಿಟ್ಟು ಗುಣಮಟ್ಟ ಹಾಳು ಮಾಡಲಾಗಿದೆ ಜೊತೆಗೆ ಕನಿಷ್ಠ 1ಕೋಟಿ ಬಡ್ಡಿ ಬಂದಿದೆ ಎಂದರು.
ಈ ವರ್ಷ ಹಣ ಇದ್ದರೂ ಸಹಿಗಾಗಿ ಅಧಿಕಾರಿ ಇಲ್ಲ. ನಿಯೋಜಿತ ಎಂಡಿ ಸಹ ಕಾರ್ಖಾನೆಗೆ ಬಂದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸರಕಾರವನನು ಜವಾಬ್ದಾರಿ ಮಾಡಿದರು.
50ಸಾವಿರ ಕ್ವಿಂಟಲ್ ಸಕ್ಕರೆ ನಿರ್ಯಾತ ಮಾಡಿದೆ. ಹಾಕಿಯನ್ನು ಪ್ರತಿ ಕೆಜಿಗೆ 10ಕೊಡುವುದಾಗಿ ಕೇಂದ್ರ ಸರಕಾರ ಹೇಳಿ ಮೂರು ತಿಂಗಳಿಂದ 1ಪೈಸೆ ಕೊಟ್ಟಿಲ್ಲ ಎಂದರು.
ಹಾಗಾದ್ರೆ ರೈತರೇಕೆ ಸರಕಾರಿ ಸ್ವತ್ತು ಜಪ್ತು ಮಾಟಬಾರದು ಎಂದು ಪ್ರಶ್ನಿಸಿದರು. ಬೆಳಗಾವಿಯಲ್ಲಿ ರೂಲ್ ಆಫ್ ಲಾ ಇಲ್ಲ. ಪ್ರಜಾಪ್ರಭುತ್ವ್ ಆಚೆ ಅಧಿಕಾರಿಶಾಹಿ ಮತ್ತು ತೋಳ್ಬಲದ ದುರ್ವರ್ತನೆ ನಡೆದಿದೆ.
ಈ ಕೂಡಲೇ ಕೋರ್ಟ್ ಮೊರೆ ಹೋಗಲಾಗುವುದು ಎಂದರು.
₹1950 ರೂ. ಮಾತ್ರ ನಿರ್ಯಾತ ಕಾರ್ಖಾನೆ ಮಾಡಬೇಕು ಇದರಲ್ಲಿ ಕಾರ್ಖಾನೆ ಹಾನಿ ಅನುಭವಿಸಿತು ಎಂದರು.
ಕೇಂದ್ರ ಸರಕಾರ 50ಸಾವಿರ ಕ್ವಿಂಟಲ್ಗೆ ನಮಗೆ ₹5ಕೋಟಿ ಹಣ ಕೊಡಬೇಕು ಎಂದು ಒತ್ತಾಯಿಸಿದರು.
₹2.20ಲಕ್ಷ ಕ್ವಿಂಟಲ್ ಸಕ್ಕರೆ ನಮ್ಮ ಗೋದಾಮಿನಲ್ಲಿ ಇದೆ. ಮಾರಲು ಇಟ್ಟುಕೊಳ್ಳುಲು ಸಾಕಷ್ಟು ಅಡೆತಡೆ ಎಡಬಿಡಂಗಿ ಮಾರ್ಗದರ್ಶಿಗಳು ಇವೆ ಎಂದು ಕೇಂದ್ರ ರಾಜ್ಯವನ್ನು ತರಾಟೆಗೆ ತೆಗೆದುಕೊಂಡರು.
ಖಾಸಗಿ ಕಾರ್ಖಾನೆಯವರು ರಿಕವರಿ ಉದ್ದೇಶಪೂರ್ವಕವಾಗಿ ಕಡಿಮೆ ತೋರಿಸುತ್ತಾರೆ. ಹಾಗೆ ಸಹಕಾರಿ ನಮ್ಮ ಕಾರ್ಖಾನೆ ಮಾಡಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಚೇಲಾ: ಜಿಲ್ಲೆಯ ಯಾವ್ಯಾವ ಕಾರ್ಖಾನೆಗಳು ಬಾಕಿ ಕೊಟ್ಟಿಲ್ಲ. ಎಷ್ಟು ಬಾಕಿ ಇದೆ ಎಂಬುವುದನ್ನು ಡಿಸಿ ಬೊಮ್ಮನಹಳ್ಳಿ ಸ್ಪಷ್ಠಪಡಿಸಬೇಕು. ಈ ಡಿಸಿ ಬಲಾಢ್ಯರ ಚೇಲಾ ಆಗಿದ್ದಾರೆ ಎಂದು ಡಿಸಿಗೆ ವಿವರ ಬಹಿರಂಗಪಡಿಸಲು ಚಾಲೆಂಜ್ ಮಾಡಿದರು.
ನಮ್ಮ ಕಾರ್ಖಾನೆ ಏರಿಯಾ ಕಬ್ಬು ಒಳ್ಳೆ ರಿಕವರಿ ಹೊಂದಿದ್ದು ಇತರ ಕಾರ್ಖಾನೆಗಳು ನಮ್ಮ ಕಬ್ಬು ಒಡೆಯುತ್ತಿವೆ ಎಂದರು.
ಮೋಹನ ಸಂಬರಗಿ, ಈರಣ್ಣ ಕಂಬಳಿ, ಗುರಲಿಂಗ ಬೆಂಡಿಗೇರಿ, ಶಿವನಗೌಡ ಪಾಟೀಲ, ವಿರೇಶ ತುರಮರಿ, ವಿಜಯ ಸಾಣಿಕೊಪ್ಪ ಇತರರು ಉಪಸ್ಥಿತರಿದ್ದರು.