SHARE

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಇಂದು ದೊಡ್ಡ ಶಾಕ್​ ಎದುರಾಗಿದೆ. ಆನಂದ್​​ ಸಿಂಗ್​ ಹಾಗೂ ರಮೇಶ್​ ಜಾರಕಿಹೊಳಿ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಇಂದು 14 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗ್ತಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ಅತೃಪ್ತ ಶಾಸಕರು ವಿಧಾನಸೌಧಕ್ಕೆ ಆಗಮಿಸಿದ್ದು ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಸರ್ಕಾರ ಪಥನ ಬಹುತೇಕ ಖಚಿತ ಅಂತಲೇ ಹೇಳಲಾಗ್ತಿದೆ.

ಮಧ್ಯಾಹ್ನ 12:45: ರಾಜೀನಾಮೆ ನೀಡಲು ಸ್ಪೀಕರ್​ ಬೆನ್ನತ್ತಿ ಹೊರಟ ಶಾಸಕರು. ಖುದ್ದು ರಮೇಶ್​ ಕುಮಾರ್​ಗೆ ರಾಜೀನಾಮೆ ಪತ್ರ ನೀಡಲು ನಿರ್ಧಾರ.

ಮಧ್ಯಾಹ್ನ 12:40: ರಾಮಲಿಂಗಾ ರೆಡ್ಡಿ, ಸೌಮ್ಯಾ ರೆಡ್ಡಿ ಸೇರಿದಂತೆ ಇನ್ನೂ 4 ಶಾಸಕರ ಆಗಮನ.

ಮಧ್ಯಾಹ್ನ 12:39: ಸ್ಪೀಕರ್​​ ಅನುಪಸ್ಥಿತಿ ಹಿನ್ನಲೆ, ಸ್ಪೀಕರ್​ ಕಾರ್ಯದರ್ಶಿಗೆ ರಾಜೀನಾಮೆ ನೀಡಿರುವ 10 ಶಾಸಕರು

ಮಧ್ಯಾಹ್ನ 12:38: ಅತೃಪ್ತ ಕಾಂಗ್ರೆಸ್ ಶಾಸಕರ ರಾಜೀನಾಮೆ ವದಂತಿ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ದಿಢೀರ್ ತಮ್ಮ ನಿವಾಸ ಕಾವೇರಿಯಿಂದ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಸ್ಪೀಕರ್ ಭೇಟಿಗಾಗಿ ಅವರು ತೆರಳಿರುವ ಸಾಧ್ಯತೆ ಇದೆ.

ಮಧ್ಯಾಹ್ನ 12:30: ರಾಜೀನಾಮೆ ನೀಡಲಿದ್ದಾರೆ ಎನ್ನಲಾಗ್ತಿರುವ ಕಾಂಗ್ರೆಸ್​ ಶಾಸಕರು: ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಹಿರೆಕೆರೂರು ಶಾಸಕ ಬಿ.ಸಿ ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ‌, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ.

ಮಧ್ಯಾಹ್ನ 12: 28: ರಾಜೀನಾಮೆ ನೀಡಲಿದ್ದಾರೆ ಎನ್ನಲಾಗ್ತಿರುವ ಜೆಡಿಎಸ್​​ ಶಾಸಕರು: ಗೋಪಾಲಯ್ಯ-ಮಹಾಲಕ್ಷಿ‌ ಲೇಔಟ್, ಹೆಚ್. ವಿಶ್ವನಾಥ್- ಹುಣಸೂರು, ನಾರಾಯಣ ಗೌಡ – ಕೆ.ಆರ್‌ ಪೇಟೆ

ಮಧ್ಯಾಹ್ನ 12:25: ಸ್ಪೀಕರ್ ಕಚೇರಿಗೆ ಆಗಮಿಸಿದ ಅತೃಪ್ತ ಕೈ ಶಾಸಕರು. ರಮೇಶ್ ಜಾರಕಿಹೊಳಿ‌, ಮಹೇಶ್ ಕುಮಟಳ್ಳಿ, ಶಿವರಾಮ್ ಹೆಬ್ಬಾರ್ ಆಗಮನ