SHARE

ಬೆಂಗಳೂರು: ಮೈತ್ರಿ ಸರ್ಕಾರದ 12 ಜನ ಅತೃಪ್ತ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಇಂದು ಸ್ಪೀಕರ್​ ಕಚೇರಿಗೆ ಆಗಮಿಸಿದ 12 ಶಾಸಕರು ಸ್ಪೀಕರ್ ಕಾರ್ಯದರ್ಶಿ ರೂಪಶ್ರೀ ಅವ್ರಿಗೆ ರಾಜೀನಾಮೆ ಪತ್ರ ನೀಡಲು ಮುಂದಾಗಿದ್ರು.

ವಿಷಯ ತಿಳಿಯುತ್ತಿಂದ್ದಂತೆ ಕನಕಪುರದಿಂದ ನೇರವಾಗಿ ಕಚೇರಿಗೆ ಆಗಮಿಸಿದ ಸಚಿವ ಡಿ.ಕೆ ಶಿವಕುಮಾರ್ ಅತೃಪ್ತರ ಶಾಸಕರ ಸಂಧಾನಕ್ಕೆ ​ ಮುಂದಾದ್ರು. ರಾಜೀನಾಮೆ ನೀಡದಂತೆ ಮನವಿ ಮಾಡಿದ್ರು. ಯಾರೂ ಕೂಡಾ ರಾಜೀನಾಮೆ ನೀಡಬೇಡಿ ಎಂದು ಪದೇ ಪದೇ ಮನವಿ ಮಾಡಿದ್ರು. ಅಲ್ಲದೇ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಶಿವರಾಮ್ ಹೆಬ್ಬಾರ್, ಪ್ರತಾಪ್‌ಗೌಡ ಪಾಟೀಲ್, ಮಹೇಶ್ ಕಮಟಳ್ಳಿ, ಬಿ.ಸಿ.ಪಾಟೀಲ್ ಹಾಗೂ ಮುನಿರತ್ನರ ರಾಜೀನಾಮೆ ಪತ್ರವನ್ನು ಕಿತ್ತುಕೊಂಡು ಹರಿದು ಹಾಕಿದ್ರು.