SHARE

ಖಾನಾಪುರ: ತಾಲೂಕಿನ ನಂದಗಡ ಗ್ರಾಮದಲ್ಲಿರುವ ಜಾಯಿಂಟ್ ಸೇಂಟ್ರಲ್ ಸ್ಕೂಲ್ ನಲ್ಲಿಯ ಉರ್ದು ಗಂಡುಮಕ್ಕಳ ಪ್ರಾಥಮಿಕ ಶಾಲೆಯ ಛಾವನೆ ಕುಸಿತಬಿದ್ದ ಘಟನೆ ಜರುಗಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಲ್ಲಿಗೆ ಹೋಗಿ ಪರೀಶೀಲನೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ, ನಂದಗಡ ಗ್ರಾಮಪಂಚಾಯಿತಿ ಅವರಾಗಲಿ ಸ್ಥಳಕ್ಕೆ ಭೇಟಿ ನೀಡದಿರುವುದು ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಈ ಕಟ್ಟಡದ ದುರುಸ್ಥಿಗೆ ಸರ್ಕಾರ ದಿಂದ ಸುಮಾರು ಸಲ ಹಣ ಮಂಜೂರುವಾಗಿರುವ ಬಗ್ಗೆ ಮಾಹಿತಿ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದರು. ಆದರೂ ಈ ಕಟ್ಟಡದ ದುಸ್ಥಿತಿ ಮಾಡದೇ ಇರುವುದರಿಂದ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ಮಳೆಯ ಅಬ್ಬರಕ್ಕೆ ಈ ಶಾಲೆಯ ಗೊಡೆ ಕುಸಿತ ಬಿದ್ದಿದ್ದರಿಂದ ಶಾಲಾ ಮಕ್ಕಳಿಗೆ ಯಾವ ಹಾನಿಯುಯಾಗಿಲ್ಲ ಈ ಸಂದರ್ಭದಲ್ಲಿ ಕರವೇ (ಪ್ರವೀಣ ಶೇಟ್ಟಿ) ಬಣ್ಣದ ಅಧ್ಯಕ್ಷ ರಾದ ಇಬ್ರಾಹಿಂ ತಾಹಶೀಲ್ದಾರ, ಇರಷಾಧ ಸೌದಾಗರ, ಸಮೀರ, ವಶೀಮ, ಶಾಹೀನ ಸೇರಿದಂತೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.