SHARE

ಬೆಳಗಾವಿ:ನೋ ರೆಗ್ಯೂಲರ ಎಂಜಿನೀಯರ್ಸ್… ಸ್ಮಾರ್ಟ್ ಸಿಟಿ ಅಭಿಯಂತರರು ಒಬ್ಬರೂ ಹೆಡಕ್ವಾರ್ಟರನಲ್ಲಿ ಲಭ್ಯವಿಲ್ಲ ಎಂದು ಶಾಸಕ ಅಭಯ ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು. ಇಂದು ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್ ಕರೆದ ಅಧಿಕಾರಿಗಳ ಸಭೆಯಲ್ಲಿ ಅವರು ಸ್ನಾರ್ಟ್ ಸಿಟಿ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಸ್ಮಾರ್ಟ್ ಸಿಟಿ ಕೆಲಸಗಳು ಇನ್ನೂ ಐದು ವರ್ಷ ಕಳೆದರೂ ರೂಪ ಪಡೆಯುವ ಲಕ್ಷಣಗಳಿಲ್ಲ ಎಂದು ಹರಿಹಾಯ್ದರು. ನಗರದ ಸಾರ್ವಜನಿಕ ಎಲ್ಲ ಪಾರ್ಕಗಳಿಗೆ ಮಳೆನೀರು ಕೊಯ್ಲು( rain water harvesting) ಮಾಡುವುದು ಕಡ್ಡಾಯ ಎಂದು ಮಿನಿಸ್ಟರ್ ಸೂಚಿಸಿದರು. ಸಿಟಿ ಸ್ಮಾರ್ಟ್ ಮಾಡಲು ನಿಯೋಜಿತ ಅಧಿಕಾರಿ ವರ್ಗವೂ ಸ್ಮಾರ್ಟ್ ಆಗಬೇಕು ಎಂದು ಸಚಿವ ಖಾದರ ಅಧಿಕಾರಿಗಳನ್ನು ಚುಚ್ಚಿದರು.

ಬಸ್ ಶೆಲ್ಟರ್ ಅನುಕೂಲಕರವಿರಲಿ: ಅರ್ಥವಿಲ್ಲದ ಡಿಸೈನ್ & ಸ್ಟೈಲನಿಂದ ಏನೂ ಪ್ರಯೋಜನವಿಲ್ಲ. ಬಿಸಿಲಲ್ಲಿ ಬಿಸಿಲು ತಾಗಬಾರದು, ಮಳೆಯಲ್ಲಿ ನೀರು ತಾಗಬಾರದು ಅಂತಹ ಬಸ್ ಶೆಲ್ಟರ್ ನಿರ್ಮಿಸಿ ಇಲ್ಲದಿದ್ದರೆ ಏನೂ ಉಪಯೋಗವಿಲ್ಲ ಎಂದು ಸಚಿವರು ಸೂಚಿಸಿದರು.

ಕ್ಯಾಮೆರಾ & ಸ್ಪೀಕರ್: ಸ್ಮಾರ್ಟ್ ಮತ್ತು ಸೇಫ್ಟಿಕ ಸಿಟಿ ನಿರ್ಮಿಸಲು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಶಾಶ್ವತ ವಿಜಿಲನ್ಸ್ ಕ್ಯಾಮೆರಾಗಳು ಹಾಗೂ ಅನಾನ್ಸಮೆಂಟ್ ಸ್ಪೀಕರ್ಸ್ ಅಳವಡಿಕೆ ರಸ್ತೆಗಳಲ್ಲಿ ಮಾಡಬೇಕು ಎಂದರು.ದೇಶದ ರ್ಯಾಂಕಿಂಗನಲ್ಲಿ ಬೆಳಗಾವಿ 40ನೇ ಸ್ಥಾನದಲ್ಲಿರುವ ಬಗ್ಗೆ ಸಚಿವರು ಖೇದ ವ್ಯಕ್ತಪಡಿಸಿದರು. ಮೊದಲನೇ ಹಂತದಲ್ಲಿ ಆಯ್ಕೆಯಾದ ಬೆಳಗಾವಿ ೪೦ ನೇ ಸ್ಥಾನಕ್ಕೆ ಕುಸಿದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಶಾಸಕರಾದ ಅನಿಲ ಬೆನಕೆ, ಲಕ್ಷ್ಮೀ ಹೆಬ್ಬಾಳಕರ, ಪಾಲಿಕೆ ಆಯುಕ್ತ ಶಶಿಧರ ಕುರೇರ, ಪ್ರೀತಮ ನಸಲಾಪುರೆ ಉಪಸ್ಥಿತರಿದ್ದರು.