SHARE

ನವದೆಹಲಿ: ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ದಾಸೋಹ ತತ್ವಗಳೇ  ಮೊದಲಿನಿಂದಲೂ ಮೋದಿ ಸರ್ಕಾರದ ದಾರಿದೀಪವಾಗಿದೆ ಅಂತಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಸತ್ತಿನಲ್ಲಿ ಘೋಷಿಸಿದ್ದಾರೆ. ಬಜೆಟ್​  ಮಂಡನೆ ವೇಳೆ ಮಾತನಾಡುತ್ತಿದ್ದ ಸೀತಾರಾಮನ್, ಮೋದಿ ಸರ್ಕಾರಕ್ಕೆ ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ಮತ್ತು ದಾಸೋಹ ತತ್ವಗಳು ದಾರಿದೀಪವಾಗಿವೆ.
ಇದೇ ಹಿನ್ನೆಲೆಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್, 3ಡಿ ಪ್ರಿಂಟಿಂಗ್, ರೊಬಾಟಿಕ್ಸ್ ಮುಂತಾದವುಗಳು ಸೇರಿದಂತೆ ದೊಡ್ಡ ಆದಾಯ ತಂದುಕೊಂಡುವಂಥ ಕೆಲಸಗಳ ಬಗ್ಗೆ ಟ್ರೇನಿಂಗ್ ಕೊಡಲಾಗುವುದು. ಪ್ರಧಾನಮಂತ್ರಿ ಸ್ಕಿಲ್ ಡೆವಲಪ್​ಮೆಂಟ್ ಯೋಜನೆಯಡಿ ಕನಿಷ್ಟ ಒಂದು ಕೋಟಿ ವಿದ್ಯಾರ್ಥಿಗಳಿಗೆ ಟ್ರೇನಿಂಗ್ ಕೊಡುವ ಗುರಿಯನ್ನು ಹಾಕಿಕೊಂಡಿದ್ದೇವೆ ಅಂತಾ ಅವರು ಹೇಳಿದ್ರು.