SHARE

ನಿನ್ನೆ ವಾಟ್ಸ್​​ಆ್ಯಪ್​, ಇನ್ಸ್​​ಟಾಗ್ರಾಮ್​, ಫೇಸ್​ಬುಕ್​ ಸರ್ವರ್​ ಡೌನ್​ ಆದ ಕಾರಣ ಕೆಲ ಕಾಲ ಬಳಕೆದಾರರಿಗೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಸ್ಥೆ, ಸಮಸ್ಯೆಯನ್ನುಯ ಆದಷ್ಟು ಬೇಗ ಬಗೆಹರಿಸುವುದಾಗಿ ಹೇಳಿಕೊಂಡಿತ್ತು.ಅಂತೆಯೇ ಈ ಸಮಸ್ಯೆಯನ್ನು ಪರಿಹಾರ ಮಾಡಿದೆ. ಈ ನಡುವೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹಬ್ಬಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಾಟ್ಸ್​​ಆ್ಯಪ್​ ಸ್ಥಗಿತಗೊಳಿಸುತ್ತಿದ್ದಾರೆ ಎಂಬಿತ್ಯಾದಿ ಸುಳ್ಳು ಮಾಹಿತಿಯನ್ನು ಹಬ್ಬಿಸಿದ್ದಾರೆ.

ನಿನ್ನೆ ಸಂಜೆ ವಾಟ್ಸ್​​ಆ್ಯಪ್​ನಲ್ಲಿ ಫೋಟೋ, ವಿಡಿಯೋ ಡೌನ್​ಲೌಡ್​ ಹಾಗೂ ಸ್ಟೇಟಸ್​ಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವರು ತಮ್ಮ ಅಂತರ್ಜಾಲ ಸರಿಯಿಲ್ಲ ಎಂದೇ ಭಾವಿಸಿದ್ದರು. ನಂತರ ಈ ತೊಂದರೆ ಎಲ್ಲಾ ವಾಟ್ಸ್​​ಆ್ಯಪ್​ ಬಳಕೆದಾರರಲ್ಲೂ ಕಾಣಿಸಿಕೊಂಡಿದ್ದರಿಂದ ಕೆಲವರು ನಿಟ್ಟುಸಿರು ಬಿಟ್ಟಿದ್ದರು.

ಗೂಗಲ್​ನಲ್ಲಿ ಈ ಬಗ್ಗೆ ತಡಕಾಡಿದ್ದರು. ಕೊನೆಗೂ ಸಂಸ್ಥೆ ಈ ಸಮಸ್ಯೆಯನ್ನು ಬಗೆಹರಿಸಿದೆ.ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿಯೊಂದನ್ನು ಹರಿದಾಡುತ್ತಿದೆ. ದೇಶದಲ್ಲಿ ವಾಟ್ಸ್​​​ಆ್ಯಪ್​ ಬಳಕೆ ಹೆಚ್ಚಿದ್ದರಿಂದ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇದರನುಸಾರ ರಾತ್ರಿ 11.30ರಿಂದ ಬೆಳಗ್ಗೆ 6 ಗಂಟೆವೆರೆಗೆ ವಾಟ್ಸ್​​ಆ್ಯಪ್​ ಸ್ಥಗಿತಗೊಳ್ಳುತ್ತದೆ ಎನ್ನುವ ಸಂದೇಶ ರವಾನೆಯಾಗಿತ್ತು. ಇದು ಮೋದಿ ಸರ್ಕಾರ ಮಾಡಿದ ಮಹತ್ವದ ನಿರ್ಧಾರ ಎಂದು ಕೆಲವರು ಹೇಳಿಕೊಂಡಿದ್ದರು. ಆದರೆ, ಇದು ನಕಲಿ ಸುದ್ದಿ. ಆ ರೀತಿ ಯಾವುದೇ ಆದೇಶವನ್ನೂ ಸರ್ಕಾರ ಹೊರಡಿಸಿಯೇ ಇಲ್ಲ.