SHARE

ತಬ್ರೇಜ್ ಅನ್ಸಾರಿಯನ್ನ ಹತ್ಯೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ದಲಿತಮತ್ತು ಮುಸಲ್ಮಾನರು ಮೇಲೇ ನಡೆಯುತ್ತಿರುವ ದೌಜ೯ನ್ಯ ಖಂಡಿಸಿ ದಲಿತ ಹಾಗೂ ಮುಸ್ಲಿಂ ಸಮುದಾಯದವರು ರಸ್ತೆಗಿಳಿದು ಪ್ರತಿಭಟನೆ ನಡೆಸಿ ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಿದರು ಜಾಖ೯ಂಡದಲ್ಲಿ ಮುಸ್ಲಿಂ ಸಮುದಾಯದ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದನ್ನು ಖಂಡಿಸಿ ಅಥಣಿ ಪಟ್ಟಣದಲ್ಲಿ ಯುನೈಟೆಡ್ ವೇಲಪರ್ ಪೌಂಡೆಷನ್ ಮತ್ತು ಜಮೈತ್ ಉಲ್ಮ ಇ ಸಂಘಟನೆಗಳ ನೂರಾರು ಕಾಯ೯ಕತ೯ರು ಪ್ರತಿಭಟನೆ ನಡೆಸಿದರು.

ಜಾಖ೯ಂಡದಲ್ಲಿ ತಬ್ರೇಜ ಅನ್ಸಾರಿ ಎಂಬ ಯುವಕನಿಂದ ಒತ್ತಾಯ ಪೂರ್ವಕವಾಗಿ ಹಿಂದೂ ವಿರೋಧಿ ಘೋಷಣೆ ಕೂಗಿಸಿ ಆತನ ಮೇಲೆ ದೌಜ೯ನ್ಯ ವೇಸಗಿ ದೇಶದಲ್ಲಿ ಕೋಮುವಾದ ಸ್ಫಷ್ಟಿಸಿದ ಕೆಲ ಕಿಡಿಗೆಡಿಗಳು ದೇಶದಲ್ಲಿ ಅಶಾಂತಿ ಹುಟ್ಟಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಶಹಜಾಹನ ಡೊಂಗರಗಾಂವ ಆಕ್ರೋಶ ವ್ಯಕ್ತಪಡಿಸಿದರು.