SHARE

ಬೆಳಗಾವಿ:ಶಿವು ಉಪ್ಪಾರ ದುರಙತ ಕೊಲೆ ನಡೆದರೂ ಸ್ಪಷ್ಠ ತಬಿಖೆ ಆಗಿಲ್ಲ, ಆತ್ಮಹತ್ಯೆ ಹೆಸರಲ್ಲಿ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿ ನಡೆಸುದ ಅವರು ಕರ್ನಾಟಕ ಸರಕಾರ ಮತ್ತು ಜಿಲ್ಲಾಡಳಿತ ಪ್ರಜರಣ ಮುಚ್ಚಿ ಹಾಕುತ್ತಿದ್ದಾರೆ. ಡಿಸಿ & ಎಸ್ಪಿ ಮೇಲೆ ಸಮ್ಮಿಶ್ರ ಸರಕಾರದ ಒತ್ತಡ ಇರುವುದು ಸ್ಪಷ್ಠ ಎಂದರು. ಮುಸ್ಲಿಂ ವ್ಯಕ್ತಿಯ ಹತ್ಯೆ ನಡೆದರೆ ಬೊಬ್ಬೆ ಹೊಡೆಯುವ ಸರಜಾರ ಹಿಂದುತ್ವವಾದಿಯ ಶಿವು ಉಪ್ಪಾರ ಮೊಬೈಲ್ ವಿಎಇಯೊ ಆಡಿಯೋ ಸಾಕ್ಷ್ಯ ಇನ್ನೂ ಪರಿಗಣಿಸಿಲ್ಲ.

ಗೋಕಳ್ಳ ಬೈಲಹೊಂಗಲದ ಬೇಪಾರಿ ಎಂಬಾತನನ್ನು ಪೊಲೀಸರು ಬಂಧಿಸಿಲ್ಲ. ಜುಲೈ 8ಕ್ಕೆ ಡಿಸಿ ಆಫೀಸಗೆ ರಾಜ್ಯದ ಹಿಂದೂ ಸಂಘಟನೆಗಳು ಬೆಳಗಾವಿಗೆ ಆಗಮಿಸಿ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು. ಇಡೀ ದೇಶದಲ್ಲಿ ಗೋಹತ್ಯೆ, ಗೋ ಕಳ್ಳಸಾಕಾಣೆ ವಿಪರೀತ ನಡೆದಿದೆ‌. ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ಮಾಂಸ ರಫ್ತು ನಿಲ್ಲಿಸಬೇಕು ಎಂದು ಪ್ರಧಾನಿ & ರಾಷ್ಟ್ರಪತಿಯನ್ನು ಆಗ್ರಹಿಸಿದರು.

ಹಿಂಸಾತ್ಮಕ ಪ್ರಾಣಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿದ್ದು ಯಾಕೆ, ಕೃಷಿ ಪ್ರಧಾನ ದೇಶದ ಸಾಧು ಪ್ರಾಣಿ, ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಿ ಎಂದರು. ಕೇಂದ್ರ ಸರಕಾರಕ್ಜೆ ದೇಶದಲ್ಲಿ ಶಾಂತಿ ಸೌಹಾರ್ಧತೆ ಕಾಪಾಡುವ ಮನಸ್ಸಿಲ್ಲ. ಬೆಳಗಾವಿ, ಗುಂಡ್ಲುಪೇಟೆ, ಚಾಮರಾಜನಗರ, ಬಳ್ಳಾರಿ, ಕೋಲಾರ ಎಲ್ಲ ಭಾಗಗಳಿಂದ ಗೋ ಕಳ್ಳಸಾಗಾಣೆ ನಡೆದಿದೆ ಎಂದರು. ಬಾಯಿ ಮುಚ್ಚಿದ್ದೇಕೆ: ಇಲ್ಲಿನ ಬಿಜೆಪಿ MP, MLA ಗಳು ಶಿವು ಉಪ್ಪಾರ ಕೊಲೆ ಪ್ರಕರಣದ ನಂತರ ಬಾಯಿ ಮುಚ್ಚಿದ್ದೇಕೆ ಎಂದು ಅಸಮಧಾನ ವ್ಯಕ್ತಪಡಿಸಿದರು‌.
ಬಿಜೆಪಿ MLA, MPಗಳು ಜುಲೈ 8ಕ್ಕೆ ಬೆಳಗಾವಿಯ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ ಅವರ ಮನೆಗಳಲ್ಲಿ ದನಗಳನ್ನು ಹೊಗಿಸಲಾಗುವುದು, ಅವರ ಮನೆ ಮುಂದೆ ಶಿವು ಉಪ್ಪಾರ ಪಾಲಕರು ಪ್ರತಿಭಟನೆ ಕೂಡುತ್ತಾರೆ ಎಂದು ಬಿಜೆಪಿ MLA/ MPಗಳಿಗೆ ಪ್ರಮೋದ ಮುತಾಲಿಕ ಸೂಚಿಸಿದರು.