SHARE

ಇತ್ತೀಚಿಗೆ ಜನರಿಕಾರ್ಟ್ ಮೆಡಿಸಿನ್ ರವರ ಜನೆರಿಕ್ ಔಷಧಿಯ ಶಾಖೆ, “ಫ್ಲಾರೆನ್ಸ್ ಜನರಿಕಾರ್ಟ್ ಮೆಡಿಸಿನ್”  ವಿಜಯ ನಗರದ ಹಿಂಡಲಗಾ ರಸ್ತೆಯಲ್ಲಿ ಉದ್ಘಾಟನೆ ಮಾಡಲಾಯಿತು. ಶ್ರೀ ಸಾಗರ್ ಕೋಳಿ ಹಾಗು ಶ್ರೀ ಸಚಿನ ಕೋಕಣೆ ಇವರ ಮಾಲೀಕತ್ವದ ಈ ಶಾಖೆಯನ್ನು  ಶ್ರೀಮತಿ ರಾಜೇಶ್ವರಿ ಕವಟಗಿಮಠ ಮತ್ತು ಶ್ರೀಮತಿ ನೀಲಿಮಾ ಪಾವಸೆ ಇವರಿಂದ ಉದ್ಘಾಟಿಸಲಾಯಿತು. ಫರ್ಮಸಿಷ್ಟ್ ಜನರಿಕ್ ಔಷಧಿಯು ಯಾವುದೇ ಬ್ರಾಂಡ್ ಔಷಧಿಯ ಸಮಾನ ಔಷಧಿಯಾಗಿದ್ದು, ಸಮಾನ ಗುಣಮಟ್ಟ, ಸಮಾನ ಪ್ರಮಾಣ ಮತ್ತು ಸಮಾನ ಪರಿಣಾಮ ಹೊಂದಿರುತ್ತದೆ. ಬಡವರಿಗೆ ಕೈಗೆಟುಕುವ ದರದಲ್ಲಿ ದೋರೆಯುವ ಈ ಔಷಧಿಗಳು ಖಾತ್ರಿ ಉತ್ತಮ ಗುಣಮಟ್ಟ ಪ್ರಮಾಣಿತ ಔಷದಿಗಳಗಿರುತ್ತವೆ ಎಂದು ತಿಳಿಸಿದರು. ಸಾರ್ವಜನಿಕರಲ್ಲಿ ಜನೆರಿಕ್ ಔಷಧಿಗಳ ಬಗ್ಗೆ ಆರಿವುಮೂಡಿಸಿ, ಎಲ್ಲರಿಗೂ ಅತಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಶಾಖೆಯ ಮುಖ್ಯಸ್ಥ ಶ್ರೀ ಸಾಗರ ಕೋಳಿ ತಿಳಿಸಿದರು.