SHARE

ಕಾಲಲ್ಲಿ ಬಾಟಲ್ ಕ್ಯಾಪ್ ತೆಗೆದು #BottleCapChallenge ಪೂರೈಸಿದ ಖಿಲಾಡಿ ಅಕ್ಷಯ್ ಕುಮಾರ್ . ಸೋಷಿಯಲ್ ಮೀಡಿಯಾದಲ್ಲಿ ತಿಂಗಳಿಗೊಂದು ಹೊಸ ಹೊಸ ಚಾಲೆಂಜ್ ಬರ್ತಾನೆ ಇರುತ್ತೆ. ಅದ್ರಲ್ಲೂ ಸೆಲೆಬ್ರಿಟಿಗಳು ಒಬ್ಬರಿಗೊಬ್ಬರು ಚಾಲೆಂಜ್ ಮಾಡೋದು ವೈರಲ್ ಆಗುತ್ತೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಬಾಟಲ್ಕ್ಯಾಪ್ ಚಾಲೆಂಜ್ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿದೆ.

ಕಾಲಿನಿಂದ ಬಾಟಲ್ಗೆ ಒದ್ದು ಕ್ಯಾಪ್ ಓಪನ್ ಮಾಡುವುದೇ ಈ ಚಾಲೆಂಜ್. ಜಗತ್ತಿನಾದ್ಯಂತ ಅನೇಕ ಸೆಲೆಬ್ರಿಟಿಗಳು ಈ ಚಾಲೆಂಜ್ ಕಂಪ್ಲೀಟ್ ಮಾಡಿ ವಿಡಿಯೋ ಶೇರ್ ಮಾಡ್ತಿದ್ದಾರೆ. ಖಿಲಾಡಿ ಅಕ್ಷಯ್ ಕುಮಾರ್ ಈ ಚಾಲೆಂಜ್ ಪೂರೈಸಿದ ಮೊದಲ ಬಾಲಿವುಡ್ ಸ್ಟಾರ್ ಆಗಿದ್ದಾರೆ.

ಕಾಲಿನಿಂದ ಬಾಟಲ್ ಕ್ಯಾಪ್ ಓಪನ್ ಮಾಡೋ ವಿಡಿಯೋವನ್ನ ಅಕ್ಕಿ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಹಾಲಿವುಡ್ ಸ್ಟಾರ್ ಜೇಸನ್ ಸ್ಟ್ಯಾಥಮ್ರಿಂದ ಇನ್ಸ್ಪೈರ್ ಆಗಿ ಈ ಚಾಲೆಂಜ್ ಪೂರೈಸಿದ್ದಾಗಿ ಅಕ್ಷಯ್ ಕುಮಾರ್ ಹೇಳಿದ್ದಾರೆ.