SHARE

ಬೆಳಗಾವಿಯಲ್ಲಿ ಸದ್ಯ ಆಟೋ ಡ್ರೈವರ್ಸ್ ಮತ್ತು ಪೋಲೀಸರ ನಡುವಿನ ಜಿದ್ದಾಜಿದ್ದಿ ಮುಂದುವರೆದಿದೆ. ಮಕ್ಕಳನ್ನ ಕುರಿ ಹಿಂಡುಗಳಂತೆ ಆಟೋ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದ ಡ್ರೈರ್ವರ್ಸ್ ಗಳ ವಿರುದ್ಧ ಪೊಲೀಸರು ಹೊಸ ನಿಯಮ ಜಾರಿಗೆ ತರುತ್ತಿದ್ದು ಇದನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ಆಟೋ ಡ್ರೈವರ್ಸ್ ಮತ್ತು ಮಕ್ಕಳ ಪೋಷಕರು ಕೂಡ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹೌದು ಕುರಿ ಹಿಂಡುಗಳಂತೆ ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಕೂರಿಸಿಕೊಂಡು ಟ್ರಾಫಿಕ್ ನಿಯಮಗಳನ್ನ ಗಾಳಿಗೆ ತೂರಿ ಬೆಳಗವಿಯೆಲ್ಲೆಡೆ ನಮ್ಮದೇ ರೂಲ್ಸ್ ಅಂತ ಓಡಾಡ್ತಿದ್ದ ಆಟೋ ಡ್ರೈವರ್ ಗಳಿಗೆ ಪೊಲೀಸರು ಹೊಸ ನಿಯಮ ಅಳವಡಿಸಿ ಒಂದು ಆಟೋ ರಿಕ್ಷಾದಲ್ಲಿ ಕೇವಲ ೫ ಮಕ್ಕಳನ್ನು ಮಾತ್ರ ಹೊತ್ತೊಯ್ಯುವಂತೆ ಎಚ್ಚರಿಕೆ ನೀಡಿದ್ರು, ಇದರಿಂದ ಕುಪಿತರಾಗಿದ್ದ ಆಟೋ ರಿಕ್ಷಾ ಡ್ರೈವರ್ ಗಳು ಮತ್ತು ಮಕ್ಕಳ ಪೋಷಕರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ರು.

ಪೋಷಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಆಟೋ ರಿಕ್ಷಾ ಚಾಲಕರಿಗೆ ಸಾಥ್ ನೀಡಿದ್ರು ಈ ವೇಳೆ ಮಾತನಾಡಿದ ಪೋಷಕರು ಬಾರೋ ಸಂಬಳದಲ್ಲಿ ಸಂಸಾರ ಸಾಗಿಸೋದೇ ದುಸ್ತರವಾಗಿದೆ. ಅಂಥದ್ರಲ್ಲಿ ಹೆಚ್ಚಿಗೆ ಹಣ ನೀಡಿ ಮಕ್ಕಳನ್ನ ಶಾಲೆಗೆ ಕಳುಹಿಸೋದು ಮತ್ತಷ್ಟು ಹೆಚ್ಚಿನ ಹೊರೆಯಾಗಲಿದೆ ಅಂತ ಅಳಲು ತೋಡಿಕೊಂಡರು