SHARE

ಬೆಳಗಾವಿ:ಮೋಜು ಮಸ್ತಿಯ ಪಡ್ಡೆಗಳಿಗೆ ಜೀವನಪಾಠ ನೀಡುವ ಮೂಲಕ ಶಿಸ್ತು-ಸಾಧುತ್ವ ಬೆಳೆಸಿಕೊಳ್ಳಲು ಶಾಸಕ ಅನಿಲ ಬೆನಕೆ ಕರೆ ನೀಡಿದ್ದಾರೆ. ಕಳೆದ ಒಂದು ದಶಕದಲ್ಲಿ ಬೆಳಗಾವಿ ನಗರ ಹಾಗೂ ಜಿಲ್ಲೆಯ ಗಡಿ ಭಾಗದುದ್ದಕ್ಕೂ ನಡೆದ ನೀರಿನ ಸಂವಂಧಿ ಸಾವುಗಳ ಬಗೆಗೆ ಖೇದ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಬಂತೆಂದರೆ ಮೋಜು ಮಸ್ತಿಗಾಗಿ ಅಂಬೋಲಿ, ತಿಲಾರಿ, ಗೋಕಾಕ ಫಾಲ್ಸ್, ವಜ್ರಪೊಹಾ ಫಾಲ್ಸ್, ಕಾಡು ಪ್ರದೇಶಗಳು ಹಾಗೂ ಇತರ ಪ್ರೇಕ್ಷಣಿಯ ಸ್ಥಳಗಳಿಗೆ ತಂದೆತಾಯಿಗೆ ಹೇಳದೇ ಹೋಗಿ ಪ್ರಾಣಾಪಾಯ ಮಾಡಿಕೊಳ್ಳುತ್ತಿರುವ ಬಗ್ಗೆ ಶಾಸಕ ಅನಿಲ ಬೆನಕೆ ಗಮನ ಸೆಳೆದಿದ್ದಾರೆ.

ಶಾಲಾ- ಕಾಲೇಜು ಮಕ್ಕಳು ಹಾಗೂ ಪಡ್ಡೆಗಳು ಕುಟುಂಬದ ಆಧಾರಗಳಾಗಿದ್ದಾರೆ. ಆದರೆ ಮೋಜು( stunt) ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೋಜಿನ ಗಾಗಿ ಅಪಾಯಕರ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸುವಂತೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಸಲಹಾತ್ಮಕ ಮನವಿ ಮಾಡಿದ್ದಾರೆ.
ಪೊಲೀಸ್ & ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿ ಕರ್ನಾಟಕ- ಮಹಾರಾಷ್ಟ್ರ ಗಡಿಯ ಅನೇಕ ಝರಿ ಮತ್ತು ಜಲಪಾತ( cascades&)ಪ್ರದೇಶಗಳಿಗೆ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಪಾಯದ ಸ್ವವೇದ್ಯ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.