SHARE

ಪಂಚಾಯ್ತಿಯನ್ನೇ ಬಾರ್ ಮಾಡಿಕೊಂಡು ಸದಸ್ಯರ ಅಂಧಾ ದರ್ಬಾರ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ  ರಾಯಭಾಗ ತಾಲೂಕಿನ ಬೆಂಡವಾಡ ಗ್ರಾಮ ಪಂಚಾಯತ್ನಲ್ಲಿ ನಡೆದಿದೆ. ಸದಸ್ಯರಾದ ಗುರುಪ್ರಸಾದ ಬೆನ್ನಾಳಿ,ಮತ್ತು ನಂದಕುಮಾರ್ ಪೂಜೇರಿಯಿಂದ ಗ್ರಾಮ ಪಂಚಾಯತ ಕಾರ್ಯಾಲಯ ಸಂಪೂರ್ಣ ಬಾರ್ ಆಗಿ ಪರಿವರ್ತನೆಗೊಂಡಿದೆ.

ನಿತ್ಯ ಸಾರಾಯಿ ಕುಡಿಯೋಕೆ ಪಂಚಾಯ್ತಿಯನ್ನೆ ಬಳಸುವ ಕುಡುಕರು, ಇಂದು ಪಂಚಾಯ್ತಿಲ್ಲಿ ಕುಡಿಯುವಾಗ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇಬ್ಬರು ವಾಟರ್ ಮನ್ ಹಾಗೂ ಪಂಚಾಯ್ತಿ ಸದಸ್ಯರು ಸ್ಥಳದಿಂದ ಪರಾರಿಯಾಗಿದ್ದಾರೆ. ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.