SHARE

ಬೆಳಗಾವಿ: ಧಾರವಾಡ-ಕಿತ್ತೂರು- ಬೆಳಗಾವಿ ಮಧ್ಯೆ ರೈಲು ಮಾರ್ಗ…ಗೋವಾ ಪುನೆ ನಡುವೆ ಇಂಟರಸಿಟಿ ಎಕ್ಸಪ್ರೆಸ್…ಬೆಳಗಾವಿಯಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ನಿರ್ಮಿಸಿ…
ಎಂಬಿತ್ಯಾದಿ ಹಲವು ಬೇಡಿಕೆಗಳನ್ನು ಇಂದು ಇಡಲಾಯಿತು.

ನಗರದ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯೋದ್ಯಮಿಗಳು( chamber of commerce) ಕೇಂದ್ರ ರೈಲ್ವೇ ಸಚಿವ ಸುರೇಶ ಅಂಗಡಿ ಅವರಿಗೆ ಬೆಳಗಾವಿಯ ಹತ್ತು ಹಲವಾರು ಬೇಡಿಕೆಗಳನ್ನು ಚರ್ಚೆ ಮೂಲಕ ಮುಂದಿಟ್ಟರು. ಧಾರವಾಡ-ಕಿತ್ತೂರು-ಬೆಳಗಾವಿ-ಕೊಲ್ಲಾಪುರ ರೈಲ್ವೆ ಮಾರ್ಗ ಮಾಡುವುದು, ಗೋವಾ ಮತ್ತು ಪುನಾ ಇಂಟರ್ ಸಿಟಿ ರೈಲ್ವೆ ಸಂಪರ್ಕ.ಧಾರವಾಡ & ಬೆಳಗಾವಿ ರೈಲ್ವೇ ಚಲನಾ ವೇಗ ಹೆಚ್ಚಿಸುವುದು, ಬೆಂಗಳೂರು ಮತ್ತು ಮುಂಬೈಗೆ ಬೆಳಗಾವಿಯಿಂದ ಇನ್ನೂ ಹೆಚ್ಚಿನ ರೈಲ್ವೆ ವ್ಯವಸ್ಥೆ ಮತ್ತು ಹೆಚ್ಚಿನ ಬೋಗಿ ಜೋಡಿಸಬೇಕೆಂದು ಕೋರಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಮೇಕ್ ಇನ್ ಇಂಡಿಯಾ ಎನ್ನುತ್ತಾರೆ. ಆದರೆ ಸ್ಥಳೀಯವಾಗಿ ಉತ್ಪಾದನೆಯಾಗುವ ರೈಲ್ವೇ ಉತ್ಪನ್ನಗಳನ್ನು ರೈಲ್ವೆ ಇಲಾಖೆಯವರು ಖರೀದಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು. ರೈಲ್ವೇ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿದೆ. ವಿದೇಶದಿಂದ ರೈಲ್ವೇ ಬಿಡಿಭಾಗಗಳ ಆಮದು ಮಾಡಿಕೊಳ್ಳುವುದರಲ್ಲೇ ಅಧಿಕಾರಿಗಳಿಗೆ ಆಸಕ್ತಿ ಇದೆ. ಮಧ್ಯವರ್ತಿಗಳ ಹಾವಳಿಯೂ ಜಾಸ್ತಿಯಾಗಿದೆ ಎಂದು ಉದ್ಯಮಿಗಳು ದೂರಿದರು.ಶಾಸಕ ಅಭಯ ಪಾಟೀಲ ಮಾತನಾಡಿ ಆದಷ್ಟು ಬೇಗ ಫ್ಲೈಓವರ್ ಗಳನ್ನು ಪೂರ್ಣಗೊಳಿಸಲು ಕೋರಿದರು.ಚರ್ಚೆಯಲ್ಲಿ ಬಂದ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದಾಗಿ ಸುರೇಶ ಅಂಗಡಿ ತಿಳಿಸಿದರು.
ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಹೇಶ ಬಾಗಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜವಳಿ, ಕ್ರೆಡೈ ರಾಜ್ಯ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ, ಜಿಲ್ಲಾಧ್ಯಕ್ಷ ರಾಜೇಶ ಹೆಡಾ, ಉದ್ಯಮಿ ಸಚಿನ್ ಸಬ್ನಿಸ್, ದೀಪಕ್ ದಡೋತಿ, ದಿಲೀಪ್ ಚಿಟ್ನಿಸ್, ದಿಲೀಪ್ ಚಿಂಡಕ್, ಬಕುಲ್ ಜೋಶಿ, ಹೇಮಂತ ಲಟ್ಟೆ, ಸತೀಶ್ ಗೌರಗೊಂಡ, ಮಹೇಶ ಹುದಲಿ, ಗೂಳಪ್ಪ ಹೊಸಮನಿ, ರಾಜೇಂದ್ರ ಹರಕುಣಿ, ಸುಧೀರ ದರೇಕರ್, ಬಾಳಣ್ಣ ಕಗ್ಗಣಗಿ ಉಪಸ್ಥಿತರಿದ್ದರು.