SHARE

ಬೆಳಗಾವಿ:ದಾತಾರ್, ಬಾಬಾಗೌಡರ ನಂತರ ಬೆಳಗಾವಿಗೆ ಕೇಂದ್ರದಲ್ಲಿ ಈಗ ಅಧಿಕಾರ ದೊರೆತಿದ್ದು, ಮೋದಿ ಸರಕಾರದಲ್ಲಿ ನಿಜವಾಗಿ ರೈಲ್ವೇ ಯೋಜನೆಗಳು ಕಾರ್ಯರೂಪ ಪಡೆಯಲಿವೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ನುಡಿದರು.

ಲೋಕಸಭೆ ಜಯಭೇರಿ ನಂತರ ಬಿಜೆಪಿ ಕಾರ್ಯಕರ್ತರಿಗೆ ಇಲ್ಲಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮೋದಿ ಸರಕಾರದಲ್ಲಿ ರೈಲ್ವೇ ಬಜೆಟ್ ರಾಜಕೀಯ ರಹಿತವಾಗಿದೆ. ಅಂದೆಲ್ಲ ರೈಲ್ವೇ ಲೈನ್ ಡಬಲಿಂಗ್ ಹೆಸರಲ್ಲಿ ಸರ್ವೇ ಮಾಡುವಲ್ಲಿ ಮಾತ್ರ ಹೆಸರಾಗಿದ್ದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಕರ್ನಾಟಕದ ನೆನೆಗುದಿಗೆ ಬಿದ್ದ ರೈಲ್ವೇ ಯೋಜನೆಗಳನ್ನು ದೇಶದ 11ನೇ ರೈಲ್ವೇ ಮಂತ್ರಿಯಾಗಿ ಸುರೇಶ ಅಂಗಡಿ ಶ್ರಮದಲ್ಲಿ ವೇಗ ಪಡೆಯಲಿವೆ ಎಂದರು.

ಕೇಂದ್ರ ರೈಲ್ವೇ ಸಚಿವ ಸುರೇಶ ಅಂಗಡಿ ಮಾತನಾಡಿ ಬಿಜೆಪಿ ಪಕ್ಷಕ್ಕೆ ಜಯಭೇರಿ ಸಿಗಲು ಕಾರ್ಯಕರ್ತರ ಹಗಲಿರುಳ ದುಡಿಮೆಯೇ ಕಾರಣ. ಪಕ್ಷವನ್ನು ಶಿಸ್ತು ನಿಷ್ಠೆಯಿಂದ ಕಟ್ಟಿ ಬೆಳೆಸಿದ ಕಾರ್ಯಕರ್ತರಿಗೆ ಧನ್ಯವಾದ ಎಂದರು.ಜಿಲ್ಲೆಯ ಎಲ್ಲ ಭಾಗದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರನ್ನು ಸನ್ಮಾನುಸಲಾಯಿತು.ಮಹಾಂತೇಷ ಕವಟಗಿಮಠ, ಬಾಲಚಂದ್ರ ಜಾರಕಿಹೊಳಿ, ಅಭಯ ಪಾಟೀಲ, ಅನಿಲ ಬೆನಕೆ, ಸಂಜಯ ಪಾಟೀಲ, ಮಹಾದೇವಪ್ಪ ಯಾದವಾಡ, ಅಶೋಕ ಪೂಜಾರಿ, ಮನೋಹರ ಕಡೋಲಕರ, ಡಾ. ವಿಶ್ವನಾಥ ಪಾಟೀಲ, ರಾಜೇಂದ್ರ ಹರಕುಣಿ, ಎಂ. ಎಲ್. ಮುತ್ತೆನ್ನವರ, ಎಂ. ಬಿ. ಝಿರಲಿ, ರಾಜು ಚಿಕ್ಕನಗೌಡರ, ಈರಣ್ಣ ಕಡಾಡಿ, ಪ್ರಭು ಹೂಗಾರ, ರಾಜು ಟೋಪನ್ನವರ, ಲೀನಾ ಟೋಪನ್ನವರ, ಉಜ್ವಲಾ ಬಡವನಾಚೆ, ಶಿಲ್ಪಾ ಕೇಕರೆ ಇತರರು ಉಪಸ್ಥಿತರಿದ್ದರು.