SHARE

ಬೆಳಗಾವಿಗರ ಬಹುದಿನಗಳ ಬೇಡಿಕೆಯಾಗಿದ್ದ, ಬೆಳಗಾವಿ-ಮುಂಬೈ ಸ್ಪೈಸ್ ಜೆಟ್ ವಿಮಾನಯಾನ ಸೇವೆಗೆ ಇಂದು ಶಾಸಕ ಅಭಯ ಪಾಟೀಲ ಅವರು ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಉಡಾನ್ ಯೋಜನೆಯಡಿ ಸ್ಥಳೀಯ ಜನಪ್ರತಿನಿಧಿಗಳ ಪ್ರಯತ್ನದಿಂದ ಈ ವಿಮಾನಯಾನ ಸೇವೆಯನ್ನ ಆರಂಭಿಸಲಾಗಿದೆ.

90 ಸೀಟುಗಳಿರುವ ವಿಮಾನದಲ್ಲಿ ಮೊದಲದಿನ 55 ಪ್ರಯಾಣಿಕರು ಪ್ರಯಾಣಿಸಿದರು. ನಂತರ ಮಾತನಾಡಿದ ಶಾಸಕ ಅಭಯ ಪಾಟೀಲ ಅವರು ಮುಂದೆ ಬೆಳಗಾವಿಯಿಂದ ದೆಹಲಿ ವಿಮಾನಯಾನ ಸೇವೆ ಆರಂಭಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಆಶಯದಂತೆ ಸರ್ವೇ ಸಾಮಾನ್ಯರು ಕೂಡ ವಿಮಾನಯಾನವನ್ನ ಮಾಡುವ ಅವಕಾಶವನ್ನ ಕಲ್ಪಿಸಲಾಗುವುದೆಂದರು.