SHARE

ಸರ್ವ ಶಿಕ್ಷಣ ಅಭಿಯಾನದಡಿ ಶಿಕ್ಷಣ ಇಲಾಖೆ ಹತ್ತು ಹಲವು ಸರ್ಕಾರದ ಮಹತ್ವಾಕಾಂಕ್ಷೀಯ ಯೋಜನೆಯಡಿ ಉಚಿತ ಹಾಗೂ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಆದರೆ, ಇಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ಸ್ಥಳಾವಕಾಶವಿಲ್ಲದೆ ಬೆಂಚ್‍ಗಳ ಮೂಲೆಗಳಲ್ಲಿ ಹಾಗೂ ಸಮೂದಾಯ ಭವನಗಳಲ್ಲಿ ಕುಳಿತು ಶಾಲೆ ಕೆಲೆಯುವ ಪರಸ್ಥಿತಿ ನಿರ್ಮಾಣವಾಗಿದ್ದು ಹಲವು ಮೂಲ ಭೂತ ಸೌಕರ್ಯ ಕೊರತೆಗಳ ಮದ್ಯ ಶಾಲೆ ಕಲಿಯುವ ಪರಿಸ್ಥಿತಿ ಸುಮಾರು ಎರಡು ವರ್ಷಗಳಿಂದ ಚಾಲ್ತಿಯಲ್ಲಿದೆ.

ಹೌದು ,
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅನಿವಾರ್ಯತೆಯ ಪರಿಸ್ಥತಿಯಲ್ಲಿ ಮಕ್ಕಳು ಶಾಲೆ ಕಲಿಯುತ್ತಿದ್ದು ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಭಾವಿ ಜನಪ್ರತಿನಿಧಿಗಳು ಜಾನ ಕುರುಡರಂತೆ ವರ್ತಿಸುತ್ತಿರುವದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಜೋಡಕುರಳಿ ನಮ್ಮೂರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯು 1939 ರಲ್ಲಿ ಆರಂಭವಾಗಿದ್ದು ಈ ಶಾಲೆಯಲ್ಲಿ ಒಟ್ಟು ಸುಮಾರು 650 ರಷ್ಟು ವಿಧ್ಯಾರ್ಥಿಗಳೊಂದಿಗೆ 1 ನೇ ತರಗತಿಯಿಂದ 8 ನೇಯ ತರಗತಿವರೆಗೆ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಗುತ್ತಿದ್ದು, ಒಟ್ಟು 23 ಶಿಕ್ಷಕರ ಪೈಕಿ 10 ಶಿಕ್ಷಕರು ಮಾತ್ರ ಇದ್ದು ಇನ್ನು ಸುಮಾರು 13 ಶಿಕ್ಷಕರ ಕೊರತೆ ಅನುಭವಿಸುತ್ತಿದೆ ಈ ಶಾಲೆ.

ಇನ್ನು ಒಟ್ಟು ಆರು ಕೊಠಡಿಗಳಲ್ಲಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯನ್ನು ನಡೆಸಲಾಗುತ್ತಿದ್ದು,  ಅದರಲ್ಲಿ ಒಂದು ಅಡುಗೆಗಾಗಿ ಹಾಗು ಶಿಕ್ಷಕರಿಗಾಗಿ ಒಂದು ಕೋಠಡಿ ಇದ್ದು, ಉಳಿದ ನಾಲ್ಕು ಕೊಠಡಿಗಳಲ್ಲಿ ಮಾತ್ರ ವಿಧ್ಯಾರ್ಥಿಗಳು ಶಿಕ್ಷಣ ಪಡೆಯುವಂತ ಪರಸ್ಥತಿಯಲ್ಲಿದ್ದಾರೆ. ಇನ್ನು ವಿದ್ಯಾರ್ಥಿಗಳ ವಿದ್ಯಭ್ಯಾಸಕ್ಕಾಗಿ 10 ಕೊಠಡಿಗಳ ಅವಶ್ಯಕತೆ ಇದೆ ಎಂದು ಇಲ್ಲಿನ ಶಿಕ್ಷಕರು ದೂರುತ್ತಿದ್ದಾರೆ.
ಸ್ವಂತ ಕಟ್ಟಡ ಇಲ್ಲ
ರಾಷ್ಟ್ರೀಯ  ಮಾಧ್ಯಮಿಕ ಶಿಕ್ಷಣದಡಿ ಪ್ರೌಡ ಶಾಲೆಯಲ್ಲಿ 8 ಹಾಗೂ 9ನೇ ತರಗತಿ 2013-14ರಲ್ಲಿ ಆರಂಭವಾದ ಸರ್ಕಾರಿ ಪ್ರೌಡಶಾಲೆ ಮಂಜುರಾಗಿದ್ದರು ಇಲ್ಲಿವರೆಗೂ ಒಂದು ಕೊಠಡಿಗಳು ಇಲ್ಲದೆ ಇರುವದು ವಿಪರ್ಯಾಸವೇ ಸರಿ.

2018-19 ರಲ್ಲಿ ಜಿಲ್ಲಾ ಪಂಚಾಯತ್‍ನಲ್ಲಿ ಕೊಠಡಿ ಕಾಮಗಾರಿ ಮಂಜುರಾಗಿದ್ದು, ಇನ್ನುವರೆಗೂ ಯಾವುದೇ ಕಾಮಗಾರಿಯ ಸುಳಿವು ಕಾಣುತ್ತಿಲ್ಲ. 9ನೇ ತರಗತಿಯಲ್ಲಿ 80 ವಿಧ್ಯಾರ್ಥಿಗಳ ಪ್ರವೇಶ ಪಡೆದರೆ 10 ನೇ ತರಗತಿಯಲ್ಲಿ 62 ಮಕ್ಕಳು ಓದುತ್ತಿದ್ದಾರೆ, ಇನ್ನೂ ದಾಖಲಾತಿಯಾಗುವ ನಿರಿಕ್ಷೇಯಲ್ಲಿದ್ದು . ಈ ಎರಡು ತರಗತಿಗಳನ್ನು ಶಾಲಾ ಆರಂಭದಿಂದಲೂ ಪ್ರಾಥಮಿಕ ಶಾಲಾ ಕೊಠಡಿಗಳಲ್ಲಿ ಕಲಿಸಲಾಗುತಿದೆ.

ಸಮುದಾಯ ಭವನಗಳೇಮಕ್ಕಳಿಗೆ ಪಾಠದ ಕೊಠಡಿ

ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ವಿಧ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯತ್ತ ಸೆಳೆಯಲು ಬಗೆ-ಬಗೆಯ ಕಸರತ್ತು ಮಾಡಲಾಗುತ್ತಿದ್ದರು ಸ್ಥಳೀಯರ ನಿರ್ಲಕ್ಷತನದಿಂದ ಕನ್ನಡ ಶಾಲೆಗಳು ಮುಚ್ಚಿಕೊಳ್ಳುತ್ತಿವೆ. ಆದರೆ, ಈ ಶಾಲೆಯಲ್ಲಿ ಸೌಕರ್ಯಗಳು ಒಂದು ಕಡೆಗಿರಲಿ ಸರಿಯಾಗಿ ಕಲಿಯಬೇಕೆಂದರೆ ಕಲಿಯಲು ಕೊಠಡಿಗಳು ಇಲ್ಲದೇ ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ ಶಾಲೆ ಕಲಿಯಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ.

ಈ ಎಲ್ಲ ತೊಂದರೆಗಳಿಂದ ಮಕ್ಕಳು ಸಮುದಾಯ ಭವನದಲ್ಲಿ ಕಲಿಯುತ್ತಿರುವದು ಎಷ್ಟರ ಮಟ್ಟಿಗೆ ಸರಿ ಎಂಬುವದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ.
ಇರುವುದರಲ್ಲೇ ಮೂರು ಕೊಠಡಿಗಳನ್ನು ಪ್ರೌಡಶಾಲೆಗೆ ಕೊಟ್ಟು ಪಕ್ಕದ ಅಂಬೇಡ್ಕರ ಭವನದಲ್ಲಿ ಹಾಗೂ ಕನಕ ಭವನದಲ್ಲಿ ವಿಧ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ನಾಲ್ಕು, ಐದು, ಆರನೇ ಹಾಗು ಏಳನೇ ತರಗತಿಯಲ್ಲಿ ಸುಮಾರು 200 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸರಿಯಾದ ಸಿಮೆಂಟ್ ಕಾಣದ ಗೋಡೆಯ ಮದ್ಯ, ನೆಲದ ಮೇಲೆ ಕುಳಿತು ಪಾಠ ಕಲಿಯ ಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ ಇಲ್ಲಿನ ಮಕ್ಕಳು

ಬಹಿರ್ದೆಸೆ ಶೌಚ,

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಸ್ವಚ್ಛ ಭಾರತ ಅಭಿಯಾನದಡಿ ಇಡೀ ದೆಶವೇ ಬಯು ಮುಕ್ತ ಭಾರತ  ಮಾಡುವ ಉದ್ದೇಶದಿಂದ ಕೋಟ್ಯಾಂತರ ಹಣ ಪೋಲು ಮಾಡುತ್ತಿದೆ. ಆದರೆ, ಈ ಶಾಲೆಯಲ್ಲಿ  ಶೌಚಾಲಯಗಳಿದ್ದರು ನೀರಿಲ್ಲದೆ ಗಬ್ಬೇದ್ದು ನಾರುತ್ತಿದ್ದು, ವಿದ್ಯಾರ್ಥಿಗಳು ಒಂದು ಕಡೇಗಿರಲಿ ವಿದ್ಯಾರ್ಥಿನಿಯರು ಬಯಲು ಬರ್ಹಿದೆಸೆಗೆ ಮಾರುಹೋಗಿದ್ದು ವಿಪರ್ಯಾಸವೇ ಸರಿ, ಇನ್ನು ಯಾರಿಗೂ ಹೇಳದ ಪರಿಸ್ಥತಿ ವಿದ್ಯಾರ್ಥಿನಿಯರಿಗೆ ಬಂದೋದಗಿದ್ದು ಇಲ್ಲಿಯ ಮಕ್ಕಳು ಬಯಲ ಬಹಿರ್ದೆಸೆಯನ್ನೆ ಆಧರಿಸಿದ್ದಾರೆ.
ನೀರಿಗಾಗಿ ಪರದಾಟ
ಶಾಲೆ ಆರಂಭವಾಗಿ ಎರಡು ವಾರ ಕಳೆದರು ವಿಧ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದ್ದು,

ಊಟದ ನಂತರ ಮಕ್ಕಳು ತಮ್ಮ ತಟ್ಟೆ ತೊಳೆಯಲು ಹಾಗೂ ಕುಡಿಯಲು ನೀರು ಬೇಕಾದರು ಸೂಮಾರು 200 ಮೀಟರ ನಷ್ಟು ಸಾರ್ವಜನಿಕ ನೀರಿನ ಟ್ಯಾಂಕರ್ ಅರಸಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ, ಶೌಚಾಲಯಗಳಲ್ಲಿ ಮಾತ್ರ ಒಂದು ತೊಟ್ಟು ನೀರು ಕಾಣದೆ ಗಬ್ಬೇದ್ದು ನಾರುತ್ತಿವೆ.

ಹಾವು ಚೇಳಿನ ಭಯ,

ಶಾಲೆಗೆ ಸರಿಯಾದ ತಡೆಗೋಡೆಯ ವ್ಯವಸ್ತೆ ಇಲ್ಲವಾಗಿದ್ದು ಮೂಲೆಗುಂಪಾದ ಶೌಚಾಲಯದಲ್ಲಿ ವಿದ್ಯಾರ್ಥಿಗಳು ಹೋಗುವಂತಾಗಿದೆ. ಅಲ್ಲೆ ಪಕ್ಕದಲ್ಲಿ ಹೋಲಗಳಲ್ಲಿ ಗಿಡ-ಕಂಟಿಗಳು ಬೆಳೆದು ನಿಂತಿದ್ದು ವಿಧ್ಯಾರ್ಥಿಗಳು ಹಾವು ಚೇಳುಗಳಿಗೆ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಡಿ ಭಾಗದ ಕನ್ನಡ ಶಾಲೆಗಳನ್ನು ನಿರ್ಲಕ್ಷ ಮಾಡುತ್ತಿರುವದರಿಂದ ಅಲ್ಲಿನ ಶಾಲೆಗಳು ಅಳಿವಿನಂಚಿನಲ್ಲಿದು,

ಕನ್ನಡ ನಾಡು ನುಡಿ ಬೆಳೆಸುವ ದೃಷ್ಟಿಯಿಂದ ಸರ್ಕಾರ ಹಲವಾರು ಯೋಜನೆಗಳ ಹೆಸರಲ್ಲಿ ಕೋಟಿ ಕೋಟಿ ಹಣ ಪೋಲು ಮಾಡುವದಾಗಿ ತೋರಿಸುವ ಡಾಂಬೀಕತೆಯನ್ನು ಬಿಟ್ಟು ಕನ್ನಡನಾಡಿನ ಹಿರಿಮೆ ಹೆಚ್ಚಿಸುವ ಕನ್ನಡ ಶಾಲೆಳ ಬಗ್ಗೆ ಕಾಳಜಿವಹಿಸುವ ಕಾರ್ಯಕ್ಕೆ ಮುಂದಾಗಬೇಕೆಂಬುವದೆ ಸ್ಥಳಿಯರ ಅಹವಾಲಾಗಿದೆ.
ಇನ್ನಾದರು ಜನಪ್ರತಿನಿಧಿಗಳು ಹಾಗೂ ಸಂಭಂದಪಟ್ಟ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ ಕೊರತೆಗಳನ್ನು ನೀಗಿಸಿ ವಿಧ್ಯಾರ್ಥಿಗಳ ಅನೂಕುಲದೊಟ್ಟಿಗೆ ಮೂಲಭೂತ ಸೌಕರ್ಯಗಳನ್ನು  ಒದಗಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.