SHARE

ಬೆಳಗಾವಿ:ಜಿಲ್ಲಾಡಳಿತ, ಜಿಪಂ. ಮಹಾನಗರ ಪಾಲಿಕೆ, ಆಯುಷ ಇಲಾಖೆ ಹಾಗೂ ಖಾಸಗಿ ದಿನಪತ್ರಿಕೆ ಸಹಯೋಗದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜಾಗೃತಿ ರ್ಯಾಲಿ ನಡೆಯಿತು.
‘ಯೋಗ ನಡಿಗೆ, ಆರೋಗ್ಯದೆಡೆಗೆ’ ಕಾರ್ಯಕ್ರಮವನ್ನು ಡಿಸಿಪಿ (ಕ್ರೈಂ) ಯಶೋಧಾ ವಂಟಗೋಡಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಚಾಲನೆ ನೀಡಿದರು.
ಚನ್ನಮ್ಮ ವೃತ್ತ, ಕಾಲೇಜು ರಸ್ತೆಯ ಮೂಲಕ ಬೋಗಾರವೆಸ್ ವೃತ್ತಕ್ಕೆ ರ್ಯಾಲಿ ಸೇರಿತು.
ಯೋಗದ ಮಹತ್ವ ಸಾರಿದ ಶಾಲಾ ಮಕ್ಕಳು ಸಾಧು ಸಂತರ ವೇಷ ಭೂಷಣ ತೊಟ್ಟು ಪ್ರದರ್ಶನ ನೀಡಿದರು.
ಸ್ಕೌಟ್ಸ್ & ಗೈಡ್ಸ್ ಕೆಡೆಟ್ಸ್ ಭಾಗವಹಿಸಿದರು.