SHARE

ಬೆಳಗಾವಿ: ಸರಿಯಾದ ಕಾಲಕ್ಕೆ ಮಳೆ ಬರಲಿಲ್ಲ, ಜಲಕ್ಷಾಮ ಉಂಟಾಗಿದೆ ಎಂದಾಗ ಪೂಜೆ, ಪುನಸ್ಕಾರ ಮಾಡುವುದು ಸಾಮಾನ್ಯ. ಅಲ್ಲದೆ, ಕತ್ತೆ ಮದುವೆ, ಕಪ್ಪೆ ಮದುವೆಯಂತ ವಿಭಿನ್ನ ಆಚರಣೆಯನ್ನೂ ಮಾಡುತ್ತಾರೆ.

ಆದರೆ, ಇಲ್ಲಿನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಜನರು ಇದೀಗ ವಿಭಿನ್ನ ರೀತಿಯಲ್ಲಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ನೀರಿಗಾಗಿ ದೇವರಿಗೇ ಜಲ ದಿಗ್ಬಂಧನ ಹಾಕಿದ್ದಾರೆ.

ಪಟ್ಟಣದ ಐತಿಹಾಸಿಕ ಪ್ರಸಿದ್ಧ ಸೂರ್ಯನಾರಾಯಣ ದೇವಸ್ಥಾನದಲ್ಲಿ ಘಟನೆ ನಡೆದಿದೆ. ತೀವ್ರ ಬರಗಾಲ ಉಂಟಾಗಿರುವ ಕಾರಣ ಕಂಗೆಟ್ಟಿರುವ ಸ್ಥಳೀಯ ಜನರು, ಸೂರ್ಯನಾರಾಯಣ ದೇಗುಲದ ಗರ್ಭಗುಡಿಯಲ್ಲಿ ನೀರು ತುಂಬಿಸಿ ಬಾಗಿಲು ಹಾಕುವ ಮೂಲಕ ದೇವರಿಗೇ ದಿಗ್ಬಂಧನ ಹಾಕಿದ್ದಾರೆ. ದೇವರ ಮೂರ್ತಿ ನೀರಿನಲ್ಲಿ ಮುಳುಗಿದೆ.

ಇಲ್ಲಿ ಈ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೇವಸ್ಥಾನದಲ್ಲಿ ನೀರು ತುಂಬಿಸಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಈ ಜನರದ್ದು. ಹಿಂದೊಮ್ಮೆ ಇದೇ ರೀತಿ ಮಾಡಿದ್ದಾಗ ಉತ್ತಮ ಮಳೆಯಾಗಿ ನೀರಿನ ಕ್ಷಾಮ ನೀಗಿತ್ತು.