SHARE

ಹೌದು ಹೀಗೊಂದು ಪ್ರಶ್ನೆ ಬೆಳಗಾವಿಯ ಕನ್ನಡಿಗರಲ್ಲಿ ಮೂಡಲು ಕಾರಣವಾದ ಘಟನೆ ಅಂದ್ರೆ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಬಳಸಿದ ಭಾಷೆ.

ಚುನಾವಣೆಯಲ್ಲಿ ಕನ್ನಡಿಗರನ್ನ ಬೆಳಗಾವಿಯಲ್ಲಿ ಎತ್ತಿ ಹಿಡಿದು ಕನ್ನಡಿಗರ ಮತಗಳ ಕಬಳಿಸಿದ್ದ ಸಚಿವ ಸುರೇಶ ಅಂಗಡಿ, ರಾಜ್ಯದ ಬಹುತೇಕ ಸಂಸದರು ಪ್ರಮಾಣ ವಚನವನ್ನ ನಮ್ಮ ಕನ್ನಡ ಭಾಷೆಯಲ್ಲಿ ಸ್ವೀಕರಿಸಿದರೆ ಅನಂತಕುಮಾರ್ ಹೆಗಡೆ ಮತ್ತು ಸುರೇಶ ಅಂಗಡಿ ಮಾತ್ರ ವಿದೇಶಿ ವ್ಯಾಮೋಹದ ಇಂಗ್ಲಿಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯದ ಉಳಿದ 26 ಸಂಸದರು ಪಕ್ಷಭೇದ ಮರೆತು ಕನ್ನಡವನ್ನ ಸಂಸತ್ತಿನಲ್ಲಿ ಎತ್ತಿ ಹಿಡಿದ ಗೌರವವನ್ನ ಸಚಿವ ಸುರೇಶ ಅಂಗಡಿ ಮತ್ತು ಅನಂತಕುಮಾರ್ ಹೆಗಡೆ ತಲೆ ತಗ್ಗಿಸುವಂತೆ ಮಾಡಿದ್ದು ಸುಳ್ಳಲ್ಲ ಈ ಕಾರಣದಿಂದ ಆಕ್ರೋಶಭರಿತರಾದ ಬೆಳಗಾವಿಯ ಕನ್ನಡ ಜನತೆ ಇಂದು ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸಚಿವರಾದ ಮೇಲೆ ಭಾಷೆಯನ್ನ ಎತ್ತಿ ಹಿಡಿದ ನಾಯಕರನ್ನ ಕರುನಾಡು ಕಂಡಿದೆ. ಆದ್ರೆ ಚನ್ನಮ್ಮನ ನಾಡಿನಿಂದ ಆಯ್ಕೆಯಾದ ಸಂಸದ ಸುರೇಶ ಅಂಗಡಿಯ ವರ್ತನೆ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸುರೇಶ ಅಂಗಡಿಯವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.