SHARE

ಬೆಳಗಾವಿ:ಸಮೀಪದ ಮಣ್ಣೂರ ಗ್ರಾಮಕ್ಕೆ ಹೈಸ್ಕೂಲ ಸೇವೆ ವಿಸ್ತರಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಇಂದು ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಣ್ಣೂರು ಗ್ರಾಮದಲ್ಲಿ ಎಂಟನೇ ತರಗತಿವರೆಗೆ ಮಾತ್ರ ಶಾಲೆಗೆ ಅವಕಾಶವಿದ್ದು 9th & 10th ತರಗತಿಗಳನ್ನು ಆರಂಭಿಸುವುದು ತುರ್ತು ಅಗತ್ಯವಿದೆ. ಈ ಬಗ್ಗೆ ಹಲವು ಬಾರಿ ಡಿಡಿಪಿಐ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬೇಡಿಕೆಗೆ ಪ್ರತಿಯಾಗಿ ಸರಕಾರದ ಅಭಿಪ್ರಾಯ ಏನು ಎಂಬುವುದೂ ಸಹ ಇನ್ನೂವರೆಗೆ ತಿಳಿದುಬಂದಿಲ್ಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಡಿಡಿಪಿ ಕಚೇರಿಗೆ ಹೈಸ್ಕೂಲ ಬೇಡಿಕೆ ಕುರಿತು ಸಲ್ಲಿಸಲಾದ ಹಲವು ಮನವಿಗಳಲ್ಲಿ ಒಂದೇ ಒಂದು ಮನವಿಯನ್ನು ಡಿಡಿಪಿಐ ಸರಕಾರದ ಗಮನಕ್ಕೆ ತಂದಿಲ್ಲ ಎನ್ನುವುದು ಗಮನಾರ್ಹ.
ತಡಬಡಾಯಿಸಿದ ಡಿಡಿಪಿಐ: ತಮ್ಮೂರಿಗೆ ಹೈಸ್ಕೂಲು ಬೇಕೆಂದು ಮಾಡಲಾದ ಹಲವಾರು ಲಿಖಿತ ಮನವಿಗಳನ್ನು ಸರಕಾರದ ಗಮನಕ್ಕೆ ಏಕೆ ತಂದಿಲ್ಲ ಎಂಬ ಪ್ರಶ್ನೆಗೆ ಡಿಡಿಪಿ ತಡಬಡಾಯಿಸಿದರು.
ಸರಕಾರಕ್ಕೆ ತಮ್ಮ ಮನವಿ ತಿಳಿಸಿದ್ದೇವೆ, ಇ-ಮೇಲ್ ಮಾಡಿದ್ದೇವೆ ಎಂದು ಹಾರಿಕೆ ಉತ್ತರ ನೀಡಲು ಯತ್ನಿಸಿದಾಗ ಜನ ತರಾಟೆಗೆ ತೆಗೆದುಕೊಂಡರು.