SHARE

ಸತತವಾಗಿ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು,ಮಾಜಿ ಕೌನ್ಸಲರ್ ಗಳು,ದಲಿತ ಸಂಘಟನೆಗಳು ಹೋರಾಟ ಮಾಡಿ ಅಕ್ರಮ ಪುಟ್ ಪಾಥ್ ತೆರವು ಗೊಳಿಸುವಂತೆ ಕೋಲಾರ ‌ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ರು ಏಚ್ಚೇತ್ತುಗೊಳ್ಳದ ಅಧಿಕಾರಿಗಳು, ಇಂದು ಮುಂಜಾನೆ ಕೋಲಾರ ನಗರದಲ್ಲಿನ ಪುಟ್ ಪಾತ್ ಗಳ ಮೇಲಿನ‌ ಅಕ್ರಮ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಿಸಲು ಮುಂದಾಗಿದ್ದಾರೆ.

ಕೋಲಾರ ನಗರಸಭೆಯ ಅಧಿಕಾರಿಗಳ ದಿಢೀರ್ ನಿರ್ಧಾರ ಕ್ಕೆ ಕಾರಣ ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಬೆಳ್ಳಂಬೆಳಿಗ್ಗೆ ನಗರಸಭೆ ಸಿಬ್ಬಂದಿ, ಅಧಿಕಾರಿಗಳು ಅಕ್ರಮ ಪುಟ್ ಪಾತ್ ಮೇಲಿನ‌ ಅಂಗಡಿಗಳನ್ನು ತೆರವು ಮಾಡಿಸಲಾಯಿತು. ಕೋಲಾರ ನಗರದ ನಚಿಕೇತ ನಿಲಯ,ರಂಗಮಂದಿರ,ಜಿಲ್ಲಾ ಗ್ರಂಥಾಲಯ ಕಚೇರಿಯ ಮುಂದೆ ಅಕ್ರಮವಾಗಿ ಪುಟ್ ಪಾತ್ ಮೇಲೆ ಅಂಗಡಿಗಳು ತಲೆಎತ್ತಿದ್ದವು, ನಾಗರೀಕರು ಓಡಾಡಲು ದಾರಿ ಇಲ್ಲದೆ ದಟ್ಟವಾದ ವಾಹನಗಳು ಓಡಾಡುವ ರಸ್ತೆಯಲ್ಲಿ ಅಂಗೈಯಲ್ಲಿ ಜೀವ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ನಗರಸಭೆಯ ನಡತೆ ಕಂಡು ನಾಗರೀಕರು ಹಿಡಿ ಶಾಪ ಹಾಕುತ್ತಿದ್ದರು, ಏಚ್ಚೇತ್ತು ಕೊಳ್ಳದ ಅಧಿಕಾರಿಗಳು ಇಂದು ಕಾರ್ಯಪ್ರವೃತ್ತರಾಗಿದ್ದು ನಾಗರೀಕರಿಗೆ ಆಶ್ಚರ್ಯ ಮೂಡಿಸಿದೆ.

ಹಲವು ವರ್ಷ ಗಳಿಂದ ಪುಟ್ ಪಾತ್ ಅಕ್ರಮ ಅಂಗಡಿಗಳಿಂದ‌ ಅದೇಷ್ಟು ಅಧಿಕಾರಿಗಳು, ಕೌನ್ಸಲರ್ ಗಳು,ಸಂಘಟನೆ ಕಾರರು ವಾರದ,ತಿಂಗಳ ಹಪ್ತ ವಸೂಲಿ‌ಮಾಡಿ ಕೊಂಡು ಬರುತ್ತಿದ್ದರು.

ಆದ್ರೆ ಇಂದು ನಗರಸಭೆ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರ ಹಪ್ತ ವಸೂಲಿಕಾರರಿಗೆ ಬಿಸಿ ತುಪ್ಪವಾಯಿತು. ಅದು ಏನೇ‌ಆಗಲಿ ನಾಗರೀಕರು ನೆಮ್ಮದಿಯಿಂದ ಓಡಾಡಲು ಪಟ್ ಪತ್ ಲಭ್ಯವಾಯಿತು….ಅದು ಎಷ್ಟು ದಿನ ಎಂಬುದು ಕಾದು ನೋಡಬೇಕು.