SHARE

ಗೋ ಮಾಂಸ ಸಾಗಿಸುತ್ತಿದ್ದ ಲಾರಿ ಒಂದನ್ನು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ತಡೆದು ಅದನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿನ ಕಲಘಟಗಿ ರಸ್ತೆಯಲ್ಲಿ ನಡೆದಿದೆ.

ಎಸ್ ಡಿಎಂ ಎಂಜಿನಿಯರಿಂಗ್ ಕಾಲೇಜು ಬಳಿ ಲಾರಿಯಲ್ಲಿ ಗೋಮಾಂಸ ಹಾಗೂ ಮೂಳೆಯನ್ನು ಸಾಗಿಸಲಾಗುತ್ತಿತ್ತು ಈ ವೇಳೆ ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಕಲಘಟಗಿ ರಸ್ತೆ ಬಳಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಲಾರಿಯನ್ನು ತಡೆಯುತ್ತಿದ್ದಂತೆ ಲಾರಿ ಮಾಲೀಕ ಪರಾರಿಯಾಗಿದ್ದಾನೆ. ನಂತರ ಲಾರಿ ಚಾಲಕ ಹಾಗೂ ಕ್ಲೀನರ್ ನನ್ನು ಕಾರ್ಯಕರ್ತರು ವಶಕ್ಕೆ ಪಡೆದರು.

ನಂತರ ಪೊಲೀಸರಿಗೆ ಕಾರ್ಯರ್ತರು ಮಾಹಿತಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ವಿದ್ಯಾಗಿರಿ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದರು. ಈ ಲಾರಿ ಲೋಂಡಾ ಕಡೆ ಹೊರಟಿತ್ತು ಎಂದು ಲಾರಿ ಚಾಲಕ ಹೇಳಿದ್ದಾನೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.