SHARE

ತುಮಕೂರು: ಮೈತ್ರಿ ಇಲ್ಲದೇ ಸ್ಪರ್ಧೆ ಮಾಡಿದ್ರೆ 2 ಲಕ್ಷ ಲೀಡಲ್ಲಿ ದೇವೇಗೌಡರು ಗೆಲ್ಲುತ್ತಿದ್ದರು ಅಂತಾ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿಸಿ ಗೌರಿಶಂಕರ್ ಹೇಳಿದ್ದಾರೆ.

ಇಂದು ದೇವೇಗೌಡರ ಸೋಲಿಗೆ ಕುರಿತಾದ ಆತ್ಮಾವಲೋಕನ ಸಭೆ ನಡೆಸಲಾಯ್ತು. ಸಭೆಯಲ್ಲಿ ಮನದಾಳದ ಮಾತು ಬಿಚ್ಚಿಟ್ಟ ಗೌರಿಶಂಕರ್, ದೇವೇಗೌಡರ ಸೋಲಿಗೆ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಕಾರಣ. ನಮಗೆ ಮೈತ್ರಿ ಸಹವಾಸ ಬೇಡ. ಕುಮಾರಣ್ಣ ದೇವೇಗೌಡ್ರು ನನ್ನ ಪಕ್ಷದಿಂದ ಆಚೆ ಹಾಕಿದರೂ ಪರವಾಗಿಲ್ಲ. ನಾನು ಹೇಳೋದು ಈ ಮೈತ್ರಿ ಸಹವಾಸ ನಮಗೆ ಬೇಡ ಎಂದರು.