SHARE

ಗಾಂಧಿನಗರ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ತಾಯಿಯನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು. ಗಾಂಧಿನಗರದ ನಿವಾಸಕ್ಕೆ ಆಗಮಿಸಿ ತಾಯಿ ಹೀರಾಬೆನ್​ ಅವರನ್ನ ಭೇಟಿ ಮಾಡಿ ಕುಶಲೋಪಚರಿ ನಡೆಸಿದರು. ನಂತರ ಅಮ್ಮನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಮಗನಿಗೆ ಅಮ್ಮಾ ಹೀರಾಬೆನ್ ಮೋದಿ ತುಂಬು ಹೃದಯದಿಂದ ಆಶೀರ್ವಾದ ಮಾಡಿದರು. ಮೇ 30 ರಂದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ತಾಯಿ ಭೇಟಿಗೂ ಮುನ್ನ ಮೋದಿ ಅಹಮದಾಬಾದ್​ಗೆ ಆಗಮಿಸಿದ್ದರು. ಅಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿ, ‘ಈ ಬಾರಿಯ ಚುನಾವಣೆಯಲ್ಲೂ ನಮಗೆ ಪ್ರಚಂಡ ಬಹುಮತ ಸಿಕ್ಕಿದೆ. ಈ ಪ್ರಚಂಡ ಬಹುಮತ ನಮಗೆ ದೊಡ್ಡ ಜವಾಬ್ದಾರಿಯನ್ನ ಹೆಚ್ಚಿಸಿದೆ. ಸಾಮಾನ್ಯ ಜನರ ಸಮಸ್ಯೆಯನ್ನ ಬಗೆಹರಿಸಲು ಮುಂದಿನ ಐದು ವರ್ಷಗಳನ್ನ ಸರಿಯಾಗಿ ಬಳಸಿಕೊಳ್ಳಬೇಕು. ಎಲ್ಲಾ ಕ್ಷೇತ್ರಗಳಲ್ಲೂ ನಾವು ಅಭಿವೃದ್ಧಿ ಸಾಧಿಸಬೇಕು’ ಅಂತಾ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.