SHARE

ಬೆಳಗಾವಿ: ನಮ್ಮ ಪಾರ್ಟಿ ಈಗ ಸೇಫ್ ಆಗಿದೆ. ಬಾಲ್ ಈಗ ಬಿಜೆಪಿ ಮತ್ತು ಅತೃಪ್ತರ ಕಡೆಯಿದೆ. ಈಗೆನಿದ್ದರೂ ಅವರೇ ಹೇಳಬೇಕು ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಅವರು, ನಮ್ಮ ಸರ್ಕಾರ 4 ವರ್ಷದ ಸ್ಥಿರವಾಗಿ ಇರುತ್ತದೆ. ಈಗಾಗಲೇ ಮೂರು-ನ್ಕಾಲು ಮಂದಿ ಅತೃಪ್ತರು ಇದ್ದಾರೆ. ಅವರು ಪಾರ್ಟಿಯಿಂದ ಅಂತರ ಕಾಪಾಡಿಕೊಂಡಿದ್ದಾರೆ. ಮೂರ್ನಾಲ್ಕು ಜನ ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ. ಸರ್ಕಾರ ಬೀಳಿಸಲು ಸಂಖ್ಯೆ ಜಾಸ್ತಿ ಬೇಕು ಎಂದರು.

ಕುಮಾರಸ್ವಾಮಿ ರಾಜೀನಾಮೆ ನೀಡುವ ಅವಶಕತೆ ಇಲ್ಲ. ಇನ್ನೇನಿದ್ದರೂ ಅತೃಪ್ತರು ಯಾರ್ಯಾರು? ಎಲ್ಲಿದ್ದಾರೆ? ಏನ್ ಮೀಟಿಂಗ್ ಮಾಡ್ತಾರೆ, ಯಾರ್ಯಾರು ರೆಸಾರ್ಟ್‌ಗೆ ಹೋಗ್ತಾರೆ ಅನ್ನೋದನ್ನ ಹುಡುಕಬೇಕು ಎಂದು ಸತೀಶ್ ಜಾರಕಿಹೊಳಿ ಹೇಿಳಿದ್ರು

ಇದೇ ವೇಳೆ ರೋಷನ್‌ ಬೇಗ್ ಪ್ರಧಾನಿ ಮೋದಿಯನ್ನು ಹೊಗಳಿದ ವಿಚಾರವಾಗಿ ಮಾತನಾಡಿದ ಅವರು, ರೋಷನ್‌ ಬೇಗ್ ಪ್ರಧಾನಿಗೆ ಶುಭಾಶಯ ಕೋರಿದ್ದು ತಪ್ಪಲ್ಲ. ಅತೃಪ್ತರು ರೆಸಾರ್ಟ್ ರಾಜಕಾರಣ ಮಾಡ್ತಾರೆ ಅಂತಾ ಈಗಾಗಲೇ ಹೇಳಿರುವೆ. ದಿನವೂ ಅದನ್ನೆೇ ಹೇಳಲು ಆಗುವುದಿಲ್ಲ. ನಮಗೂ ಮಾತನಾಡಲು ಇತಿ ಮಿತಿಗಳಿವೆ ಎಂದರು. ಸರ್ಕಾರ ಉಳಿಸಲು ಹಾಲಿ ಸಚಿವರಿಂದ ರಾಜೀನಾಮೆ ಪಡೆಯುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಪಕ್ಷಕ್ಕೆ ಬಿಟ್ಟ ವಿಚಾರ. ಸರ್ಕಾರ ಉಳಿಸಲು ಪಕ್ಷ ಆ ರೀತಿಯ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿದರು.