SHARE

ನವದೆಹಲಿ: ಇಲ್ಲಿನ ಸಂಸತ್​ ಸೆಂಟ್ರಲ್ ಹಾಲ್​ನಲ್ಲಿ ಎನ್​ಡಿಎ ಮೈತ್ರಿಕೂಟದ ಸಭೆ ನಡೆಯಿತು. ಸಭೆಯಲ್ಲಿ ನರೇಂದ್ರ ಮೋದಿ ಅವರನ್ನ ಎನ್​ಡಿಎ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ನೂತನ ಸಂಸದರು, 39 ಮಿತ್ರಪಕ್ಷಗಳ ಮುಖ್ಯಸ್ಥರು, ಬಿಜೆಪಿಯ ಹಿರಿಯ ನಾಯಕರು ಹಾಗೂ ವಿವಿಧ ರಾಜ್ಯಗಳ ಸಿಎಂಗಳು ಮೋದಿ ಹೆಸರನ್ನ ಅನುಮೋದಿಸಿದರು.

ಇದಾದ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ನರೇಂದ್ರ ಮೋದಿ ಹೆಸರನ್ನ ಸಂಸದೀಯ ನಾಯಕ ಸ್ಥಾನಕ್ಕೆ ಅನುಮೋದನೆ ಮಾಡಿದರು. ಹಾಗೇ  ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ, ಎಲ್​ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವನ್, ತಮಿಳುನಾಡು ಸಿಎಂ ಪಳನಿ ಸ್ವಾಮಿ ಸೇರಿದಂತೆ ಹಲವು ನಾಯಕರು ಮೋದಿ ಹೆಸರನ್ನ ಅನುಮೋದಿಸಿದರು. ಎಲ್ಲಾ ಮುಖಂಡರು ಮೋದಿ ಹೆಸರನ್ನ ಹೇಳುತ್ತಿದ್ದಂತೆ ಸಭೆಯಲ್ಲಿದ್ದ ಎಲ್ಲಾ ನಾಯಕರೂ ಮೇಜು ತಟ್ಟಿ ಬೆಂಬಲ ಸೂಚಿಸಿದರು.

ನಂತರ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮಾತನಾಡಿ ನರೇಂದ್ರ ಮೋದಿಯನ್ನ ಎರಡನೇ ಬಾರಿಗೆ ಸರ್ವಾನುಮತದಿಂದ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು ಅಂತಾ ಹೇಳಿದರು.

ನಂತರ ಸಭೆಯಲ್ಲಿದ್ದ ನಾಯಕರು ಮೋದಿಗೆ ಹೂಗುಚ್ಚ ನೀಡಿ ಸ್ವಾಗತ ಮಾಡಿದರು. ಅಮಿತ್ ಶಾ, ಪ್ರಕಾಶ್ ಸಿಂಗ್ ಬಾದಲ್, ಉದ್ಭವ್ ಠಾಕ್ರೆ, ಎಲ್​ಕೆ ಅಡ್ವಾನಿ, ನಿತೀಶ್ ಕುಮಾರ್, ಮುರುಳಿ ಮನೋಹರ್ ಜೋಶಿ, ಸುಷ್ಮಾ ಸ್ವರಾಜ್, ದೇವೇಂದ್ರ ಪಡ್ನವಿಸ್, ಪಳನಿಸ್ವಾಮಿ ಸೇರಿದಂತೆ ಗಣ್ಯರೆಲ್ಲಾ ಸ್ವಾಗತ ಕೋರಿದರು.