SHARE
ಬೆಂಗಳೂರು:ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳು ಅಂದ್ರೆ ರಿಲೀಸ್​ಗೂ ಮುನ್ನವೇ ದೊಡ್ಡ ಹೈಪ್ ಕ್ರಿಯೇಟ್ ಮಾಡ್ತವೆ. ಸದ್ಯ ಅಂಥದೊಂದು ಕ್ರೇಜ್​ ಮೂಡಿಸಿರೋದು ಅಂದ್ರೆ ಉಪ್ಪಿ ಹಾಗೂ ಚಂದ್ರು ಕಾಂಬಿನೇಷನ್​ನ ’ಐಲವ್​ಯೂ’ ಸಿನಿಮಾ. ವಿಭಿನ್ನ ಪೋಸ್ಟರ್, ಟ್ರೇಲರ್, ಜೊತೆಗೆ ಮನತಣಿಸೋ ಹಾಡುಗಳಿಂದಲೇ ಸಿಕ್ಕಾಪಟ್ಟೇ ಸೌಂಡ್ ಮಾಡಿದ್ದ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್​ಗೆ ತಯಾರಿ ನಡೆದಿದೆ.

ಕಿಚ್ಚನಿಂದ ಹೊಸ ಟ್ರೈಲರ್ ರಿಲೀಸ್..!
ವಿಶೇಷ ಅಂದ್ರೆ ಚಿತ್ರದ ಟ್ರೈಲರ್​ನ್ನ ಇದೇ 27 ಕ್ಕೆ ಕಿಚ್ಚ ಸುದೀಪ್ ರಿಲೀಸ್ ಮಾಡಲಿದ್ದಾರೆ. ಈ ಹಿಂದೆ ಹಲವು ಹೊಸ ಪ್ರತಿಭೆಗಳ ಸಿನಿಮಾಗೆ ಸಾಥ್ ನೀಡಿದ್ದ ಕಿಚ್ಚ ಇದೀಗ ರಿಯಲ್ ಸ್ಟಾರ್ ಸಿನಿಮಾಗೂ ಜೊತೆಯಾಗ್ತಿದ್ದಾರೆ. ಈ ಮೂಲಕ ಮತ್ತೆ ಮಕುಂದ ಮುರಾರಿ ಜೋಡಿ ಒಂದಾಗಿದೆ. ಇನ್ನು, ಚಿತ್ರದಲ್ಲಿ ರಚಿತಾ ರಾಮ್, ಹಾಗೂ ಸೋನುಗೌಡ ಜೊತೆಯಾಗಿದ್ದು ಉಪ್ಪಿ ಡಬಲ್ ಶೇಡ್​ನಲ್ಲಿ ಮಿಂಚಲಿದ್ದಾರೆ. ಪ್ರೀತಿ, ಪ್ರೇಮ, ಎಲ್ಲಾ ಪುಸ್ತಕದ ಬದನೆಕಾಯಿ ಅಂತಿದ್ದ ಉಪ್ಪಿ ಮತ್ತೇ ಡಿಫೆರೆಂಟ್ ಸ್ಟೈಲ್​ ಮೂಲಕ ಪ್ರೀತಿಯ ಪಾಠ ಮಾಡೋಕೆ ಬಂದಿದ್ದಾರೆ. ಇನ್ನು ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಸುಮಾರು ಸಾವಿರಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಜೂನ್.14 ರಂದು ರಲೀಸ್ ಆಗಲಿದೆ. ಚಿತ್ರದಲ್ಲಿ ಜೈ ಜಗದೀಶ್, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಬಹುತೇಕರು ನಟಿಸಿದ್ದು, ಎರಡನೇ ಟ್ರೈಲರ್​ ಹೇಗಿರಲಿದೆ ಕಾದು ನೋಡಬೇಕಿದೆ.