SHARE

ಬೆಂಗಳೂರು:ರಿಯಲ್ ಸ್ಟಾರ್ ಉಪೇಂದ್ರ ನಟನೆಯಲ್ಲಿ ಬುದ್ಧಿವಂತ  ಸಿನಿಮಾ ಭರ್ಜರಿ ಸಕ್ಸಸ್​ ಕಂಡಿತ್ತು. ಇದೀಗ ಅದೇ ಟೈಟಲ್​ನಲ್ಲಿ ಬುದ್ಧಿವಂತ-2 ಸಿನಿಮಾ ಸೆಟ್ಟೇರಿದೆ. ಟಿ.ಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ಚಿತ್ರ ಸೆಟ್ಟೇರಿದ್ದು 24ರಂದು ನಗರದ ಧರ್ಮಗಿರಿ ಮಂಜುನಾಥ ಸ್ವಾಮಿ ದೇಗುಲದಲ್ಲಿ ಮುಹೂರ್ತ ನಡೆಯಲಿದೆ. ಚಿತ್ರದಲ್ಲಿ ಉಪ್ಪಿ ಡಬಲ್ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದು ಸೋನಾಲ್ ಮಾಂಟೇರಿಯಾ ಹಾಗೂ ಮೇಘನಾ ರಾಜ್ ಜೊತೆಯಾಗಲಿದ್ದಾರೆ.

ಮೌರ್ಯ ನಿರ್ದೇಶನದ ಫಿಲಾಸಫಿಕಲ್ ಥ್ರಿಲ್ಲರ್ ಜಾನರ್‌ನ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದ್ದು, ಭರತ್ ಪರಶುರಾಮ್ ಛಾಯಾಗ್ರಹಣವಿದೆ. ಯೋಗರಾಜ್ ಭಟ್ ಹಾಗೂ ವಿ.ಮನೋಹರ್ ಸಾಹಿತ್ಯದಲ್ಲಿ 4 ಹಾಡುಗಳಿರಲಿವೆ. ಈಗಾಗ್ಲೇ ಉಪ್ಪಿ ಅಭಿನಯಿಸಿದ್ದ ಬುದ್ಧಿವಂತ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ಮಹಾಬುದ್ಧಿವಂತನಾಗಿ ಬುದ್ಧಿವಂತ-2 ಆಗಿ ಬರ್ತಿರೋ ಉಪ್ಪಿ ಈ ಸಿನಿಮಾದಲ್ಲೂ ಅದೇ ಮೋಡಿ ಮಾಡ್ತಾರಾ ನೋಡಬೇಕಿದೆ. ಆದ್ರೆ ಉಪ್ಪಿ ಅಭಿಮಾನಿಗಳಿಗಂತೂ ಉಪ್ಪಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮತ್ತೆ ಬ್ಯುಸಿಯಾಗಿರೋದು ಖುಷಿ ತಂದಿದೆ.