SHARE

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಸುಮಲತಾ ಅಂಬರೀಶ್​ ನಾಳೆ ಮಾಜಿ ಸಿಎಂ, ಬಿಜೆಪಿ ಮುಖಂಡ ಎಸ್.ಎಂ ಕೃಷ್ಣರನ್ನ ಭೇಟಿ ಮಾಡಲಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆಗೆ ಸದಾಶಿವನಗರದ ಎಸ್‌.ಎಂ ಕೃಷ್ಣಾ ನಿವಾಸಕ್ಕೆ ತೆರಳಲಿರುವ ಸುಮಲತಾ, ಕೃಷ್ಣಾರನ್ನು ಭೇಟಿ ಮಾಡಲಿದ್ದಾರೆ. ಚುನಾವಣೆಗೂ ಮೊದಲು ಸುಮಲತಾ ಎಸ್‌.ಎಂ.ಕೃಷ್ಣಾರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ರು. ಇದೀಗ ಗೆಲುವಿನ ಬಳಿಕ ಕೃಷ್ಣಾರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾರಿಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕದೇ ಬೇಷರತ್ ಬೆಂಬಲ ನೀಡಿತ್ತು.