SHARE

ಬೆಂಗಳೂರು: ಕಾಂಗ್ರೆಸ್​ನಲ್ಲಿ 1968-69ರಿಂದ ಲಿಂಗಾಯ್ತರನ್ನು ಕಡೆಗಣಿಸಲಾಗ್ತಿದೆ. ಹೀಗಾಗಿ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕದಲ್ಲಿ ಒಂದು ಸ್ಥಾನವನ್ನ ಕಾಂಗ್ರೆಸ್ ಗೆದ್ದಿಲ್ಲ ಅಂತಾ ಹಿರೇಕೆರೂರು ಕಾಂಗ್ರೆಸ್ ಬಿ.ಸಿ ಪಾಟೀಲ್ ಹೊಸ​ ಬಾಂಬ್​ ಸಿಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನಲ್ಲಿ ಸ್ಟೇಜ್ ಲೀಡರ್ಸ್ ಹೆಚ್ಚಾಗಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡುವವರನ್ನ ಗುರುತಿಸುತ್ತಿಲ್ಲ. ಕಾರ್ಯಕರ್ತರನ್ನ ಹಿಡಿದಿಡುವಲ್ಲಿ ಪಕ್ಷ ವಿಫಲವಾಗಿದೆ. ಪಕ್ಷ ಉಳಿಯಬೇಕಾದ್ರೆ ನೈತಿಕ ಹೊಣೆ ಹೊರಬೇಕಾಗುತ್ತದೆ. ಅಲ್ಲದೇ, ಕಾಂಗ್ರೆಸ್​ ಲಿಂಗಾಯತರನ್ನು ಕಡೆಗಣಿಸಿದ್ದು ನಗ್ನ ಸತ್ಯ. ಈ ಹಿಂದೆಯೂ ಜೆ.ಹೆಚ್ ಪಟೇಲ್, ಎಸ್.ಆರ್ ಬೊಮ್ಮಾಯಿ, ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವ್ರಿಗೆ ಅಧಿಕಾರ ತಪ್ಪಿಸಲಾಗಿತ್ತು ಅಂತಾ ಹೇಳಿದರು. ಇದೇ ವೇಳೆ, ನನಗೆ ಸಮಾಧಾನವೇ ಆಗಿಲ್ಲ, ಹೀಗಿರುವಾಗ ಅಸಮಾಧಾನ ಅನ್ನುವ ಪ್ರಶ್ನೆ ಹೇಗೆ..? ಜಿಲ್ಲೆಯಲ್ಲಿ ಏಕೈಕ ಶಾಸಕನಾಗಿ ನಾನು ಆಯ್ಕೆಯಾಗಿದ್ದೆ‌. ಆದ್ರೂ ಕೂಡಾ ಪಕ್ಷದಲ್ಲಿ ನನಗೆ ಸಚಿವ ಸ್ಥಾನ ನೀಡಲಿಲ್ಲ. ಈ ಬಗ್ಗೆ ನನಗೆ ಅಸಮಾಧಾನ ಇದೆ ಅಂತಾ ಹೇಳಿದರು.

‘ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು’
ಆಪರೇಷನ್​ ಕಮಲ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ರಮೇಶ್ ಜಾರಕಿಹೊಳಿ‌ಯವರನ್ನು ಈಗ ಭೇಟಿ ಮಾಡಿಲ್ಲ ಅಂತಾ ಸ್ಪಷ್ಟ ಪಡಿಸಿದ್ರು. ಸಿದ್ದರಾಮಯ್ಯ ಪ್ರಮಾಣಿಕ ಹಾಗೂ ದಕ್ಷ ರಾಜಕಾರಣಿ. ಹಾಗಾಗಿ ಅವರು ಮತ್ತೊಮ್ಮೆ ಸಿಎಂ ಆಗ್ಬೇಕು ಅನ್ನೋದು ರಾಜ್ಯದ ಜನತೆಯ ಆಶಯ ಅಂತಾ ಹೇಳಿದರು.