SHARE

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ ಇಂದು ಬಿಜೆಪಿ ಹಿರಿಯರಾದ ಎಲ್​​ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್​ ಜೋಷಿ ಅವರನ್ನು ಭೇಟಿ ಮಾಡಿದರು.

ಬಿಜೆಪಿ ಹಿರಿಯರಿಗೆ ಮೋದಿ ಧನ್ಯವಾದ ಸಲ್ಲಿಸಿ ಅಡ್ವಾಣಿ ಜೀ, ನಿಮ್ಮಂಥ ದಿಗ್ಗಜರು ದಶಕಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿ, ಜನರಿಗೆ ಹೊಸ ಸಿದ್ಧಾಂತವನ್ನು ನೀಡಿದ್ದರಿಂದಲೇ ಬಿಜೆಪಿ ಇಂದು ಯಶಸ್ಸು ಗಳಿಸಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಅಲ್ಲದೇ ಮುರಳಿ ಮನೋಹರ್​ ಜೋಷಿ ಅವರು ಒಬ್ಬ ಪರಿಣಿತ ಹಾಗೂ ಅವರ ಜ್ಞಾನಕ್ಕೆ ಸಾಟಿಯೇ ಇಲ್ಲ. ಭಾರತದ ಶಿಕ್ಷಣ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಗಮನಾರ್ಹ. ಅವರು ಸದಾ ಬಿಜೆಪಿಯನ್ನು ಬಲಪಡಿಸಲು ಹಾಗೂ ನನ್ನನ್ನೂ ಸೇರಿದಂತೆ ಹಲವಾರು ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುವಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇಂದು ಬೆಳಗ್ಗೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆ ಎಂದು ಟ್ವೀಟ್​ ಮಾಡಿದ್ದಾರೆ.