SHARE

ಬೆಳಗಾವಿ: ರಾಜ್ಯದಲ್ಲಿ ಮತ್ತೆ ಬಿಜೆಪಿ ತನ್ನ ನಾಗಾಲೋಟ ಮುಂದುವರೆಸಿದೆ. ಮೊದಲ ಹಂತದಲ್ಲೇ ತನ್ನೆಲ್ಲ ಶಕ್ತಿ ಪ್ರದರ್ಶನವನ್ನ ಬಿಜೆಪಿ ಈಗಾಗಲೇ ಪ್ರದರ್ಶಿಸುತ್ತಿದೆ. ಸುಮಾರು 18 ರಿಂದ 23 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಿದೆ. ಜೊತೆಗೆ ಅಲ್ಲೊಂದು ಇಲ್ಲೊಂದು ಮೈತ್ರಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ತೀವ್ರ ಕೂತೂಹಲದ ಕ್ಷೇತ್ರಗಳಾದ ಕಲ್ಬುರ್ಗಿಲ್ಲಿ ಬಿಜೆಪಿ ಮುನ್ನಡೆಯಿದೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆಯಲ್ಲಿದ್ದಾರೆ. ಅಚ್ಚರಿ ಎಂಬಂತೆ ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನ ಬದಿಗೊತ್ತಿ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಮುನ್ನಡೆಯಲ್ಲಿದ್ದಾರೆ. ಇದೆಲ್ಲ ರಾಜ್ಯದ ಬಿಸಿ ಕ್ಷೇತ್ರಗಳ ವರದಿಗಳಾದರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಮುಖ ಕ್ಷೇತ್ರವಾದ ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಮುನ್ನಡೆ ಹೊಂದಿದ್ದಾರೆ. ಪ್ರಕಾಶ್ ಹುಕ್ಕೇರಿಯವರನ್ನ ಹಿಂದಿಕ್ಕಿರುವ ಅಣ್ಣಾಸಾಹೇಬ್ ಈಗಾಗಲೇ ಬಹುದೊಡ್ಡ ಮತಗಳ ಗಳಿಕೆಯತ್ತ ಮುನ್ನಡೆಯಲ್ಲಿದ್ದಾರೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಎಂದಿನಂತೆ ಸುರೇಶ ಅಂಗಡಿ ತಮ್ಮ ಮತಗಳಿಕೆಗಳ ಮೂಲಕ ಗೆಲುವಿನ ನಾಗಾಲೋಟದತ್ತ ಓಡುತ್ತಿದ್ದಾರೆ. ಇಲ್ಲೂ ಕೂಡ ಮೈತ್ರಿ ಅಭ್ಯರ್ಥಿ ಹಿನ್ನಡೆಯಿದ್ದು ಕುಂಟುತ್ತಾ ಸಾಗುತ್ತಿದ್ದಾರೆ. ಫಲಿತಾಂಶ ಇನ್ನಿಲ್ಲದ ಕೂತುಹಲ ಮೂಡಿಸುತಿದ್ದು ಇನ್ನು ಅಂಕಿ ಸಂಖ್ಯೆಗಳಿಂದ ಹಾವು ಏಣಿ ಆಟ ನಡೆದಿದೆ ಸಾಯಂಕಾಲ ಹೊತ್ತಿಗೆ ಕರ್ನಾಟಕದ ನಿಖರ ಫಲಿತಾಂಶ ಹೊರಬೀಳೋದು ಸತ್ಯ.