SHARE

ನವದೆಹಲಿ: ಲೋಕಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಎನ್​ಡಿಎ ಭಾರೀ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆ ಇಂದು ಸೆನ್ಸೆಕ್ಸ್​​ ಮೇಲೆ ಪರಿಣಾಮ ಬೀರಿದೆ. ಇಂದು ಬೆಳಗ್ಗೆ ಷೇರುಪೇಟೆಯ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್​​  600 ಪಾಯಿಂಟ್ಸ್​​ ಏರಿಕೆ ಕಂಡಿತ್ತು. ಇದೀಗ 40 ಸಾವಿರಕ್ಕೆ ತಲುಪಿದೆ.

ಎಸ್​​ಪಿ ಹಾಗೂ ಬಿಎಸ್​​ಇ ಸೆನ್ಸೆಕ್ಸ್​ 791 ಪಾಯಿಂಟ್ಸ್​​ನಷ್ಟು ಏರಿಕೆಯಾಗಿ 39,901.59ಕ್ಕೆ ತಲುಪಿದೆ. ಹಾಗೇ ನಿಫ್ಟಿ ಸೂಚ್ಯಂಕ 231 ಪಾಯಿಂಟ್ಸ್​​ನಷ್ಟು ಏರಿಕೆಯಾಗಿ 11,968.95ಕ್ಕೆ ತಲುಪಿದೆ. ಸ್ಪಷ್ಟವಾದ ಚುನಾವಣಾ ಫಲಿತಾಂಶ ಹೊರಬೀಳುವವರೆಗೆ ಷೇರು ಮಾರುಕಟ್ಟೆಯಲ್ಲಿ ಇನ್ನಷ್ಟು ಏರಿಳಿತಗಳನ್ನ ನಿರೀಕ್ಷಿಸಬಹುದಾಗಿದೆ.