SHARE

ಬೆಳಗಾವಿ : ಇಲ್ಲಿನ ಆಟೋನಗರದ ಕೆಎಸ್‌ಸಿಎ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಶನ್‌ ಮೈದಾನದಲ್ಲಿ ಮೇ 25ರಂದು ಆರಂಭವಾಗಲಿರುವ ಭಾರತ ‘ಎ’ ತಂಡದ ವಿರುದ್ಧ ಟೆಸ್ಟ್‌ ಪಂದ್ಯ ಆಡಲು ಶ್ರೀಲಂಕಾ ‘ಎ’ ತಂಡ  ಬೆಳಗಾವಿಗೆ ಆಗಮಿಸಿದೆ. ”ಕಳೆದ ರಾತ್ರಿ ನಗರಕ್ಕೆ ಬಂದಿರುವ ತಂಡದ ಸದಸ್ಯರು ಇಲ್ಲಿನ UK 27 ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.  ಇಂದು ಭಾರತ ‘ಎ’ ತಂಡ ಬೆಳಗಾವಿಗೆ ಬರಲಿದೆ”, ಎಂದು ಬೆಳಗಾವಿ ಕೆಎಸ್‌ಸಿಎ ಮೈದಾನದ ವ್ಯವಸ್ಥಾಪಕ ದೀಪಕ ಪವಾರ್‌ ತಿಳಿಸಿದ್ದಾರೆ. ಭಾರತ ಮತ್ತು ಶ್ರೀಲಂಕಾ ‘ಎ’ ತಂಡಗಳು ಬೆಳಗಾವಿಯಲ್ಲಿ ಒಂದು ಟೆಸ್ಟ್‌ ಮತ್ತು ಮೂರು ಏಕ ದಿನ ಪಂದ್ಯಗಳನ್ನು ಆಡಲಿವೆ.