SHARE

ದೊಡ್ಡಬಳ್ಳಾಪುರ: ಯಲಹಂಕ ರಸ್ತೆಯಲ್ಲಿರುವ ಟೋಲ್ ಬಳಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಳೆದ ಎಂಟು ತಿಂಗಳಿಂದೆ ಟೋಲ್ ನಿರ್ಮಿಸಿದ್ದು ಸುಂಕ ವಸೂಲಾತಿ ಮಾಡುತ್ತಿದ್ದಾರೆ. ಆದರೆ ಈವರೆಗೂ ಯಾವುದೇ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಸಾರ್ವಜನಿಕರು ಏಕಮುಖ ರಸ್ತೆಯಲ್ಲೆ ಓಡಾಡುವ ಅನಿವಾರ್ಯತೆವಾಗಿದೆ. ದಿನಕ್ಕೆ ಲಕ್ಷಾಂತರ ವಾಹನಗಳು ಇದೇ ರಸ್ತೆಯಲ್ಲಿ ಓಡಾಡುವುದರಿಂದ 50ಕ್ಕೂ ಹೆಚ್ಚು ಅಪಘಾತಗಳಾಗಿವೆ. ಸುಮಾರು 23ಕ್ಕೂ ಹೆಚ್ಚು ಸಾವಾಗಿದ್ದೆ ಎಂದು ಸ್ಥಳೀಯ ಜನರು ಟೋಲ್ ವಿರುದ್ಧ ಧರಣಿ ಮಾಡಿದ್ದಾರೆ. ಸ್ಥಳೀಯರಿಗೆ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಬೆಂಬಲ‌ ನೀಡಿದ್ದು ಇಂದು ಟೋಲ್ ನಿಂದ ಸುಮಾರು 8 ಕಿ.ಮಿಗಳಷ್ಟು ದೂರ ರಸ್ತೆ ತಡೆ ನೀಡಲಾಗಿತ್ತು. ಯಾವಾಗ ಟೋಲ್ ಬಳಿ ಗಲಾಟೆಯಾಗಬಹುದೆಂದು ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಭಾಯಿಸಿದರು.