SHARE

ಕೋಲಾರ: ಕೆಸಿ ವ್ಯಾಲಿ ನೀರಿನ‌ಬಣ್ಣ ಬದಲಾವಣೆ ಆತಂಕ ಪಡಬೇಡಿಯಂದು ಕೋಲಾರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ ನೀಡಿದರು.ನರಸಾಪುರ ಕೆರೆ ನೀರಿನ‌ ಮಾದರಿ ಪ್ರಯೋಗಾಲಯಕ್ಕೆ ,ನೀರಿನ ಪರೀಕ್ಷೆ ನಂತರ ಮುಂದಿನ ನಿರ್ಧಾರ ಎಂದು ಡಿಸಿ ಸ್ಪಷ್ಟನೆ ನೀಡಿದರು.

ಕೆಸಿ ವ್ಯಾಲಿ ನೀರು ಕಲ್ಮಶ ಹಸಿರು ಬಣ್ಣದಲ್ಲಿ ಲಕ್ಷ್ಮೀಸಾಗರದಿಂದ ನರಸಾಪುರ ಹಾಗೂ ಇತರೆ ಕೆರೆಗಳಿಗೆ ಹರಿಯುತ್ತಿದೆ ಎಂಬ ಮಾಹಿತಿ ಆಧರಿಸಿ ಕೋಲಾರ ಜಿಲ್ಲಾಧಿಕಾರಿ ಮಂಜುನಾಥ್ ತಜ್ಞರ ಜೊತೆ ನರಸಾಪುರ ಕೆರೆ ಗೆ ಬೀಟಿ ನೀಡಿ ಪರಿಶೀಲಿಸಿದರು.ಹಸಿರು ಬಣ್ಣದಲ್ಲಿ ಹರಿಯುತ್ತಿರುವ ಕೆಸಿ ವ್ಯಾಲಿ ನೀರಿನ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದರು.

ಜಿಲ್ಲೆಯ ಜನತೆ ಆತಂಕ ಪಡಬೇಡಿ ನಿಂತನೀರಿನಲ್ಲಿ‌ ಕಲ್ಮಶ ಹಸಿರು ಬಣ್ಣದ ಪಾಚಿ ಇದ್ದು ಹಸಿರು ನೀರು ಬಣ್ಣದಿಂದ ಹರಿಯುತ್ತಿದೆ. ಇದು ವಿಷಕಾರಿ ಎಂಬ ವದಂತಿ ಹಿನ್ನಲೆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿ ಬಂದ ನಂತರ ಮುಂದಿನ ತಿರ್ಮಾನ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟತೆ ಪಡಿಸಿದ್ದಾರೆ.

ಜಿಲ್ಲಾಧಿಕಾರಿ ಬೇಟಿ ವೇಳೆ ಕಂದಾಯ ಅಧಿಕಾರಿಗಳು, ಪರಿಸರಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.