SHARE

ಮುಂಬೈ: ನಿನ್ನೆಯಷ್ಟೇ ಲೋಕಸಭಾ ಚುನಾವಣೆಗೆ ತೆರೆಬಿದ್ದಿದ್ದು, ಮೇ 23ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಎಕ್ಸಿಟ್​ ಪೋಲ್​ ಸಮೀಕ್ಷೆಗಳು ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ಹೆಚ್ಚಿನ ಸೀಟ್​​ಗಳನ್ನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿರೋ ಹಿನ್ನೆಲೆ ಇಂದು ಸೆನ್ಸೆಕ್ಸ್​​ ಮೇಲೆ ಪರಿಣಾಮ ಬೀರಿದೆ. ಇಂದು ಬೆಳಗ್ಗೆ ಷೇರು ಪೇಟೆಯ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್​​ 950 ಪಾಯಿಂಟ್ಸ್​​ಗೂ ಅಧಿಕ ಜಿಗಿತ ಕಂಡಿದೆ.

ಷೇರು ಮಾರುಕಟ್ಟೆ ಆರಂಭದಲ್ಲಿ ಎಸ್​​ಪಿ ಹಾಗೂ ಬಿಎಸ್​​ಇ ಸೆನ್ಸೆಕ್ಸ್​ 962.12 ಪಾಯಿಂಟ್ಸ್​​ನಷ್ಟು ಏರಿಕೆಯಾಗಿ 38,892.89ಗೆ ತಲುಪಿದೆ. ಹಾಗೇ ನಿಫ್ಟಿ ಸೂಚ್ಯಂಕ 286.95 ಪಾಯಿಂಟ್ಸ್​​ನಷ್ಟು ಏರಿಕೆಯಾಗಿ 11,694.10ಕ್ಕೆ ತಲುಪಿದೆ. ಚುನಾವಣಾ ಫಲಿತಾಂಶ ಹೊರಬೀಳುವವರೆಗೆ ಷೇರು ಮಾರುಕಟ್ಟೆಯಲ್ಲಿ ಇನ್ನಷ್ಟು ಏರಿಳಿತಗಳನ್ನ ನಿರೀಕ್ಷಿಸಬಹುದು ಎಂದು ತಜ್ಞರು ಹೇಳಿದ್ದಾರೆ.