SHARE

ಬೆಂಗಳೂರು: ಚುನಾವಣಾ ಫಲಿತಾಂಶಕ್ಕೆ ಮೂರು ದಿನಗಳು ಇರುವಂತೆಯೇ ಸಚಿವ ಡಿ.ಕೆ ಶಿವಕುಮಾರ್ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಇಷ್ಟು ದಿನ ಚುನಾವಣೆ, ಸ್ಟ್ರಾಟರ್ಜಿ, ಟ್ರಬಲ್ ಶೂಟಿಂಗ್, ಇಡಿ ವಿಚಾರಣೆ, ಐಟಿ ಲೆಕ್ಕಪತ್ರ ಅಂತಾ ತಲೆ ಕೆಡಿಸಿಕೊಂಡಿದ್ದ ಅವರು ಸದ್ಯ ಬಿಡುವು ಮಾಡಿಕೊಂಡು ಕುಟುಂಬ ಸಮೇತರಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಒಂದು ವಾರಗಳ ಕಾಲ ಅವರು ಆಸ್ಟ್ರೇಲಿಯಾದಲ್ಲಿಯೇ ವಿಶ್ರಾಂತಿ ಜೊತೆಗೆ ಎಂಜಾಯ್ ಮಾಡಲಿದ್ದಾರೆ ಅಂತಾ ಮೂಲಗಳು ತಿಳಿಸಿವೆ.

ಇನ್ನು ಈಗಾಗಲೇ ಎಕ್ಸಿಟ್​​ಪೋಲ್​ಗಳು ರಾಜ್ಯದಲ್ಲಿ ದೋಸ್ತಿ ಪಕ್ಷಗಳಿಗೆ ಹಿನ್ನಡೆಯಾಗಬಹುದು ಎಂದು ಭವಿಷ್ಯ ನುಡಿದಿವೆ. ಈ ಹಿನ್ನೆಲೆಯಲ್ಲಿ ಸದ್ಯ ಎಲ್ಲರ ಚಿತ್ತ ಫಲಿತಾಂಶದ ದಿನದತ್ತ ಕೇಂದ್ರಿಕೃತವಾಗಿದೆ. ಆದ್ರೆ ಟ್ರಬಲ್​ ಶೂಟರ್ ಮಾತ್ರ ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕುಟುಂಬದೊಂದಿಗೆ ಸಮಯ ಕಳೆಯಲು ವಿದೇಶಕ್ಕೆ ಹಾರಿದ್ದಾರೆ.